ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಚಿವ ಮುನೇನಕೊಪ್ಪ ಅವರ ಕ್ಷೇತ್ರ, ಡಿಸಿಯವರ ಮಾವನ ಊರಿನಲ್ಲಿಯೇ ಇಂತಹದೊಂದು ಅವ್ಯವಸ್ಥೆ

ಹುಬ್ಬಳ್ಳಿ: ಅದು ಸಚಿವ ಶಂಕರಪಾಟೀಲ ಮುನೇನಕೊಪ್ಪ ಅವರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ. ಅಲ್ಲದೇ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರ ಮಾವನವರ ಊರು. ಈ ಊರಿನಲ್ಲಿಯೇ ಜನರು ಅವ್ಯವಸ್ಥೆ ಕುರಿತು ಆಕ್ರೋಶಗೊಂಡಿದ್ದಾರೆ. ಏಕಾಏಕಿ ರಸ್ತೆ ತಡೆದು ಪ್ರತಿಭಟನೆಗೆ ಮುಂದಾಗಿದ್ದಾರೆ.

ಹುಬ್ಬಳ್ಳಿ ತಾಲೂಕಿನ ಕೋಳಿವಾಡ ಗ್ರಾಮ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರ ಮಾವನವರ ಊರು ಇಲ್ಲಿಗೆ ಸುಮಾರು ಸಾರಿ ಜಿಲ್ಲಾಧಿಕಾರಿಗಳು ಬಂದು ಹೋಗಿದ್ದಾರೆ. ಅಲ್ಲದೆ ಇಲ್ಲಿನ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳೇ ಕಣ್ಣಾರೆ ಕಂಡಿದ್ದಾರೆ. ಆದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಎಂ ಸ್ಯಾಂಡ್, ಕಲ್ಲಿನ ಕಡಿ, ಮರುಳು ಹೊತ್ತುಕೊಂಡು ಟಿಪ್ಪರ್ ಲಾರಿಗಳು ಓಡಾಡುವ ಮೂಲಕ ರಸ್ತೆಯನ್ನು ಹಾಳು ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಜನರು ವಾಹನಗಳನ್ನು ತಡೆದು ಟಿಪ್ಪರ್ ಲಾರಿ ಚಕ್ರದ ಗಾಳಿಯನ್ನು ಹೊರ ಬಿಟ್ಟು ಆಕ್ರೋಶ ವ್ಯಕ್ತಪಡಿಸಿದರು.

ನವಲಗುಂದ ವಿಧಾನಸಭಾ ಕ್ಷೇತ್ರದ ಕೋಳಿವಾಡದಲ್ಲಿ ಶಿರಹಟ್ಟಿ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿಯೇ ಟಿಪ್ಪರ್ ಲಾರಿಗಳು ಓಡಾಡುವ ಮೂಲಕ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಅಲ್ಲದೇ ಈ ಕುರಿತು ಗ್ರಾಮ ಪಂಚಾಯತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ‌ ಕೂಡ ಮಾಡಲಾಗಿದೆ. ಆದರೂ ಯಾಕೋ‌ ಜಿಲ್ಲಾಧಿಕಾರಿಗಳು ಈ ಕಡೆಗೆ ಲಕ್ಷ್ಯ ವಹಿಸಿಲ್ಲ.

ಒಟ್ಟಿನಲ್ಲಿ ಹೊಲದ ಕೆಲಸಕ್ಕೆ ಹೋಗಲು, ಏನಾದರೂ ಕೆಲಸ ಕಾರ್ಯಗಳಿಗೆ ಈ ರಸ್ತೆಯ ಮೂಲಕ ಹೋಗಲು ಜನರು ಹೈರಾಣಾಗುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಬೇಕಿದೆ.

Edited By : Shivu K
Kshetra Samachara

Kshetra Samachara

16/11/2021 12:34 pm

Cinque Terre

35.3 K

Cinque Terre

6

ಸಂಬಂಧಿತ ಸುದ್ದಿ