ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಹತ್ವದ ಅಂಶಗಳನ್ನೇ ಮರೆತ ಬಿ.ಆರ್.ಟಿ.ಎಸ್ ಯೋಜನೆ:ಅವಳಿನಗರದ ಜನರಿಗೆ ಪಾರ್ಕಿಂಗ್ ಕಿರಿಕಿರಿ

ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರದ ಅದೃಷ್ಟವೇ ಹಾಗಿದೆಯೋ ಏನೋ ಅರ್ಥವೇ ಆಗುತ್ತಿಲ್ಲ. ಒಂದಿಲ್ಲೊಂದು ಯೋಜನೆ ಹುಬ್ಬಳ್ಳಿ-ಧಾರವಾಡಕ್ಕೆ ಬರುತ್ತವೇ. ಆದರೆ ಸಾಕಷ್ಟು ಗೊಂದಲದಲ್ಲಿಯೇ‌ ಪೂರ್ಣಗೊಂಡು ಜನರನ್ನು ಹೈರಾಣಾಗಿಸುತ್ತವೆ. ಮೊದಲಿಗೆ ಮಹತ್ವಪೂರ್ಣ ಯೋಜನೆ ಎಂದು ಕರೆಯಿಸಿಕೊಳ್ಳುವ ಯೋಜನೆ ಮಹತ್ವದ ಅಂಶವನ್ನು ಮರೆತಿರುವಂತಿದೆ.

ಹುಬ್ಬಳ್ಳಿ-ಧಾರವಾಡ ಮಧ್ಯೆ ಬಿ.ಆರ್.ಟಿ.ಎಸ್ ಆರಂಭವಾದಾಗಿನಿಂದ ಒಂದಿಲ್ಲ ಒಂದು ಸಮಸ್ಯೆ ತಲೆ ಎತ್ತುತ್ತಲೇ ಇವೆ. ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಪಾರ್ಕಿಂಗ್ ಇಲ್ಲದ್ದರಿಂದ ವಾಹನ ಸವಾರರು ವಾಹನ ನಿಲ್ಲಿಸಲು ಪರದಾಡುವುದರ ಜೊತೆಗೆ ರಸ್ತೆಯ ಅಕ್ಕಪಕ್ಕದಲ್ಲಿಯೇ ಪಾರ್ಕಿಂಗ್ ಮಾಡುವಂತಾಗಿದೆ. ಅಲ್ಲದೇ ಅಂಗಡಿಕಾರರು ವ್ಯಾಪಾರ ವಹಿವಾಟು ಇಲ್ಲದೆ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ನಗರದ ಮಧ್ಯೆ ಬಿಆರ್‌ಟಿಎಸ್ ಕಾರಿಡಾರ್ ಹಾದು ಹೋಗಿದೆ. ವಾಹನ ಸವಾರರು ಅಂಗಡಿಗಳಿಗೆ ಹೋಗ ಬೇಕೆಂದರೆ ವಾಹನ ನಿಲ್ಲಿಸಲು ಎಲ್ಲಿಯೂ ಜಾಗ ಇಲ್ಲ, ರಸ್ತೆಯ ಅಕ್ಕಪಕ್ಕದಲ್ಲಿಯೇ ವಾಹನ ನಿಲ್ಲಿಸ ಬೇಕಾದ ಅನಿವಾರ್ಯತೆ ಇದೆ, ಆದರೆ, ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ ಎಂಬ ಕಾರಣಕ್ಕೆ ಪೊಲೀಸರು ಕಿರಿಕಿರಿ ಮಾಡುತ್ತಿದ್ದಾರೆ. ರಸ್ತೆಯಲ್ಲಿಯೇ ವಾಹನ ಪಾರ್ಕಿಂಗ್ ಮಾಡುವುದರಿಂದ ಪಾದಚಾರಿಗಳು ಪರದಾಡುವಂತಾಗಿದೆ.

ರಸ್ತೆಯ ಬಹುಪಾಲು ಜಾಗ ಬಿ.ಆರ್.ಟಿ.ಎಸ್ ಕಾರಿಡಾರ್ ನಿರ್ಮಾಣಕ್ಕೆ ಉಪಯೋಗಿಸಲಾಗಿದೆ. ಇದರಿಂದ ಎರಡು ಬದಿಯ ಸಾಮಾನ್ಯ ವಾಹನಗಳು ಸಂಚರಿಸುವ ಮಿಕ್ಸ್‌ ರಸ್ತೆಗಳು ಇಕ್ಕಟ್ಟಾಗಿವೆ. ಇದರಿಂದ ವಾಹನಗಳು ಹಾಗೂ ಪಾದಾಚಾರಿಗಳ ಸುಗಮ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ಈ ಸಮಸ್ಯೆಯಿಂದ ಅವಳಿ ನಗರದ ಜನತೆ ಬಿಆರ್‌ಟಿಎಸ್ ಯೋಜನೆಯನ್ನು ದೂಷಿಸುವಂತಾಗಿದೆ.

ಒಟ್ಟಿನಲ್ಲಿ ಅವಳಿ ನಗರದ ಮಧ್ಯೆ ನಿರ್ಮಿಸಿರುವ ಬಿಆರ್‌ಟಿಎಸ್‌ ಯೋಜನೆ ಅವೈಜ್ಞಾನಿಕವಾಗಿದೆ. ಇದರಲ್ಲಿ ಆಡಳಿತಾರೂಢ ಜನಪ್ರತಿನಿಧಿಗಳ ವೈಫಲ್ಯ ಕಾಣುತ್ತದೆ ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಲೇ ಸಾಗುವಂತಾಗಿದೆ.

Edited By : Shivu K
Kshetra Samachara

Kshetra Samachara

16/11/2021 12:33 pm

Cinque Terre

23.68 K

Cinque Terre

17

ಸಂಬಂಧಿತ ಸುದ್ದಿ