ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಪಟ್ಟಣಕ್ಕಷ್ಟೇ ಸೀಮಿತವಾದ ಅಧಿಕಾರಿಗಳ ಗಮನ ಹೆದ್ದಾರಿ ಪಕ್ಕ ನೋಡೋರಾರು ?

ಕುಂದಗೋಳ : ಪಟ್ಟಣದ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಸ್ವಚ್ಚ ಭಾರತ್ ಯೋಜನೆ, ಪ್ಲಾಸ್ಟಿಕ್ ಮುಕ್ತ ಜಾಗೃತೆಯ ಮಾರ್ಗದರ್ಶನ ಕೇವಲ ಪಟ್ಟಣಕ್ಕಷ್ಟೇ ಸೀಮಿತವಾಗಿ ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಬಳಿ ಕೆರೆಯಂಗಳದ ಪಕ್ಕದ ಜಾಗ ಮರೆತಂತಾಗಿದೆ.

ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಪಕ್ಕದ ಈ ಜಾಗವನ್ನೊಮ್ಮೆ ಗಮನಿಸಿ, ಇದು ಯಾವುದೋ ತ್ಯಾಜ್ಯ ವಿಲೇವಾರಿ ಘಟಕವಲ್ಲಾ, ಬದಲಾಗಿ ಈ ಜಾಗವನ್ನು ಆ ರೀತಿಯಲ್ಲಿ ಜನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಎಲ್ಲೇಂದರಲ್ಲಿ ಪ್ಲಾಸ್ಟಿಕ್ ಬಾಟಲ್, ಮಧ್ಯದ ಬಾಟಲಿಗಳು, ಮನೆಯಲ್ಲಿ ಬೇಡವಾದ ತ್ಯಾಜ್ಯ, ರಾಶಿ ರಾಶಿ ಚಹಾ ಕಪ್, ಗುಟ್ಕಾ ಪಾಕೆಟ್, ಪುಡಿ ಗ್ಲಾಸು ಎಸೆದಿದ್ದು ಬೇರೆ ಊರುಗಳಿಂದ ಬರುವ ಜನರಿಗೆ ಈ ಅವ್ಯವಸ್ಥೆಯ ದುರ್ವಾಸನೆ ಸ್ವಾಗತ ನೀಡುತ್ತಿದೆ.

ಈ ಬಗ್ಗೆ ಸಂಬಂಧಪಟ್ಟ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕ್ರಮ ಕೈಗೊಂಡು, ಇಲ್ಲಿ ತ್ಯಾಜ್ಯ ಎಸೆಯುವವರಿಗೆ ತಕ್ಕ ಶಾಸ್ತಿ ಜೊತೆ ಅನೈರ್ಮಲ್ಯ ಸ್ವಚ್ಚತೆ ಭಾಗ್ಯ ನೀಡಬೇಕಿದೆ.

Edited By : Manjunath H D
Kshetra Samachara

Kshetra Samachara

29/10/2021 02:41 pm

Cinque Terre

68.39 K

Cinque Terre

1

ಸಂಬಂಧಿತ ಸುದ್ದಿ