ಕಲಘಟಗಿ :ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯ ಇಡೀ ವಿಶ್ವಕ್ಕೆ ನೀಡಿದ ಬಹುದೊಡ್ಡ ಸಾಹಿತ್ಯ ಕೊಡುಗೆಯಾಗಿದೆ,ದೇಶ ಭಾಷೆಗೆ ಸೀಮಿತಗೊಳ್ಳದೆ ಜಾಗತಿಕವಾಗಿ ಆರಾಧಿಸಲ್ಪಟ್ಟಿದೆ ಎಂದು ಮಾಜಿ ಜಿ ಪಂ ಸದಸ್ಯ ಸಿ ಎಫ್ ಪಾಟೀಲ್ ಹೇಳಿದರು.
ಅವರು ತಾಲೂಕಿನ ತಬಕದಹೊನ್ನಳ್ಳಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಸಂಘದವರು ಹಮ್ಮಿಕೊಂಡಿದ್ದ, ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಾನವೀಯ ಗುಣಗಳನ್ನ ಮೈಗೂಡಿಸಿಕೊಳ್ಳುವುದು ಸೇರಿದಂತೆ ಉತ್ತಮ ಸಮಾಜ ನಿರ್ಮಾಣದ ಮಹತ್ವ ಸಂಗತಿಗಳನ್ನು ರಾಮಾಯಣ ಮಹಾಕಾವ್ಯದಿಂದ ಕಲಿಯಬಹುದಾಗಿದೆ ಜಾತಿ-ಧರ್ಮದ ಹೆಸರಿನಲ್ಲಿ ಮನುಷ್ಯ-ಮನುಷ್ಯರ ನಡುವಿನ ಸಂಬಂಧಗಳು ಕುಸಿಯುತ್ತಿರುವ ಈ ದಿನಗಳಲ್ಲಿ ವಾಲ್ಮೀಕಿ ರಚಿತ ಮಹಾಕಾವ್ಯ ಜಗತ್ತಿಗೆ ದಾರಿದೀಪವಾಗಿದೆ ಎಂದರು.
ಪತ್ರಕರ್ತ ರಮೇಶ್ ಸೋಲಾರಗೋಪ್ಪ ಮಾತನಾಡಿ, ವಾಲ್ಮೀಕಿ ಮಹರ್ಷಿ ಅಧ್ಯಯನದಿಂದ ಅಕ್ಷರ ಸಾಧನೆ ಮಾಡಿದ್ದಾನೆ, ಚರಿತ್ರೆಯಲ್ಲಿ ತಪ್ಪಾಗಿ ಅರ್ಥೈಸಿ ಆತನೊಬ್ಬ ದರೋಡೆಕೋರ ಕಳ್ಳ ಕೊಲೆಗಾರ ಎಂದು ಸುಳ್ಳು ಹೇಳಿಕೊಂಡು ಬರಲಾಗುತ್ತಿದೆ ಇದರ ಇದರ ಬಗ್ಗೆ ಯಾವುದೇ ಪುರಾವೆ ಇಲ್ಲ 2009ರಲ್ಲಿ ಪಂಜಾಬ್ ಉಚ್ಚ ನ್ಯಾಯಾಲಯ ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವಿರುದ್ಧ ಸ್ಟೇಟ್ ಆಫ್ ಪಂಜಾಬ್ ಪ್ರಕರಣದಲ್ಲಿ ತೀರ್ಪು ನೀಡಿದ್ದು ಕ್ರಿ ಪೂ 3 ರಿಂದ 9ಶತಮಾನದ ಮಧ್ಯದಲ್ಲಿ ಬಾಳಿದ ವಾಲ್ಮೀಕಿ ಋಷಿ ಎಂದು ದಾಖಲೆಗಳು ಹೇಳುತ್ತವೆ ಎಂದರು.
ಎಸ್ ವಿ ಗಾಯತೂಂಡೆ ಬಿ ಎಸ್ ತಿಪ್ಪಣ್ಣವರ ಮಾತನಾಡಿದರು,ಸಮಾಜ ಹಿರಿಯರಾದ ಸಂಗಪ್ಪ ಕಂಪ್ಲಿಕೂಪ್ಪ ಅಧ್ಯಕ್ಷತೆ ವಹಿಸಿದ್ದರು, ಗ್ರಾಪಂ ಅಧ್ಯಕ್ಷ ಶಿವಕ್ಕ ಕಂಪ್ಲಿಕೂಪ್ಪ,ಸಾತಪ್ಪ ಕುಂಕೂರ,ಸುಭಾಸ ಕಂಪ್ಲಿಕೂಪ್ಪ,ಸಂತೋಷ ಮಲಕನಕೋಪ್ಪ, ಪಕ್ಕೀರೇಶ ಅಜ್ಜುನವರ, ಹೋಳೆಪ್ಪ ಗಾಮಣ್ಣವರ,ಗಾಂಧಿ ತಮ್ಮಣ್ಣವರ,ಲಕ್ಷಣ ಮ್ಯಾಗಿನಮನಿ,ಮಲ್ಲೇಶ ನೂಲ್ವಿ,ಬೀರಪ್ಪ ಡೂಳ್ಳಿನ,ಪರಶುರಾಮ ಹುಲಿಹೂಂಡ* ಪಕ್ಕೀರಗೌಡ ದೊಡ್ಡಮನಿ,ರವಿ ಬಡಿಗೇರ ಮಂಜುನಾಥ, ಹುಡೇದ ಯಲ್ಲಪ್ಪ, ದಾಸರ ನಾಗಪ್ಪ, ಅಜ್ದುನವರ ಶೇಕಪ್ಪ ಉಪಸ್ಥಿತರಿದ್ದರು.
Kshetra Samachara
25/10/2021 01:18 pm