ಕುಂದಗೋಳ : ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಕಾರ್ಯಾಲಯ ಶುದ್ಧ ಕುಡಿಯುವ ನೀರು ನೈರ್ಮಲ್ಯ ವಿಭಾಗವೂ ಸರ್ಕಾರ ಸಾರ್ವಜನಿಕರಾಗಿ ನೀಡಿದ ವಾಟರ್ ಸಪ್ಲ್ಯಾ ಪೈಪ್'ಗಳನ್ನೂ ಅಜಾಗರೂಕತೆಯಿಂದ ಎಸೆದು ಪರಿಣಾಮ ಪೈಪ್'ಗಳು ಹಾಳಾಗಿದ್ದಲ್ಲದೇ ಪೈಪ್ ಇಟ್ಟ ಜಾಗದಲ್ಲಿ ಪೈಪ್'ಗಳು ಕಾಣದಂತೆ ಅಳತ್ತರಕ್ಕೆ ಕಸ ಬೆಳೆದು ಪೈಪ್ ಇಟ್ಟ ಜಾಗ ಮೂತ್ರ ವಿಸರ್ಜನೆಗೆ ಸ್ಥಳವಾಗಿ ಅನೈರ್ಮಲ್ಯ ಉಂಟಾದ ಬಗ್ಗೆ ಪಬ್ಲಿಕ್ ನೆಕ್ಸ್ಟ "ಅಧಿಕಾರಿಗಳೇ ಸ್ವಚ್ಚತೆಗೆ ಕ್ರಮ ಕೈಗೊಳ್ಳಿ ಎಂದು ವರದಿ ಪ್ರಕಟಿಸಿತ್ತು.
ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಸಹಾಯಕ ಇಂಜಿನಿಯರ್ ಪೈಪ್ ಇಟ್ಟ ಜಾಗದಲ್ಲಿ ನಿರ್ವಹಣೆ ಇಲ್ಲದೆ ಬೆಳೆದ ಕಸವನ್ನು ಶುಚಿಗೊಳಿಸಿ, ಪೈಪುಗಳನ್ನು ಸರಿಯಾಗಿ ಜೋಡಿಸಿಟ್ಟು ಮೂತ್ರ ವಿಸರ್ಜನೆಗೆ ಗುಡ್ ಬೈ ಹೇಳುವಂತೆ ಮಾಡಿ ಕರ್ತವ್ಯ ಪ್ರಜ್ಞೆ ಮೆರೆದ್ದಿದ್ದಾರೆ.
ಸಧ್ಯ ಇಲಾಖೆ ಆವರಣ ಶುಚಿಯಾಗಿದ್ದನ್ನು ಕಂಡು ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್
Kshetra Samachara
22/10/2021 10:10 am