ಧಾರವಾಡ : 1962ರಲ್ಲಿ ಇಂಗ್ಲೆಂಡ್ ನಲ್ಲಿ ತಯಾರಾದ ಗಡಿಯಾರ ಇಂದು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿತ್ತು. ಸದ್ಯ ನೈಋತ್ಯ ರೈಲ್ವೆಯ ಸಹಕಾರದಿಂದ ಈ ಗಡಿಯಾರವನ್ನು ರಿಪೇರಿ ಮಾಡಲಾಗಿದ್ದು ವಿಶ್ವವಿದ್ಯಾಲಯ ಕಟ್ಟಡದ ಐತಿಹಾಸಿಕ ಗಡಿಯಾರಗಳು ಮತ್ತೆ ಕೆಲಸ ಆರಂಭಿಸಿವೆ.
ಇನ್ನು ವಿಶೇಷ ಅಂದ್ರೆ ಇಷ್ಟು ಹಳೆಯ ಗಡಿಯಾರ ರಿಪೇರಿ ಮಾಡಿ ನೈಋತ್ಯ ರೈಲ್ವೆ ಸಿಬ್ಬಂದಿಗಳು ದಾಖಲೆ ಬರೆದಿದ್ದಾರೆ. ಕರ್ನಾಟಕದ ವಿಶ್ವವಿದ್ಯಾಲಯ ಕಟ್ಟದ ಗೋಪುರದಲ್ಲಿದ್ದ ಐತಿಹಾಸಿಕ ಗಡಿಯಾರದ ಪೈಕಿ ಉತ್ತರ ಮತ್ತು ದಕ್ಷಿಣಾಭಿಮುಖವಾದ ಎರಡು ಗಡಿಯಾರಗಳು ನಿಂತು ಹೋಗಿತ್ತು. ಸಮಯ ನೋಡಲು ಗೋಪುರ ಗಡಿಯಾರ ನೋಡುತ್ತಿದ್ದ ಜನ ಕೈ ಗಡಿಯಾರ ನೋಡುವಂತಾಗಿತ್ತು.
ಸದ್ಯ ಸುಮಾರು 1 ತಿಂಗಳ ಕಾಲ ನೈಋತ್ಯ ರೈಲ್ವೆ ಸಿಬ್ಬಂದಿಗಳ ಪರಿಶ್ರಮದಿಂದ ಆಗಸ್ಟ್ 28ರಂದು ರಿಪೇರಿ ಕಾರ್ಯ ಪೂರ್ಣಗೊಂಡಿದೆ. ಮಾರುಕಟ್ಟೆಯಲ್ಲಿ ಲಭ್ಯವಿಲ್ಲದ ಗಡಿಯಾರದ ಕೆಲವು ಬಿಡಿಭಾಗಗಳನ್ನು ಹುಬ್ಬಳ್ಳಿ ರೈಲ್ವೆ ರೈಲ್ವೆ ಕಾರ್ಯಾಗಾರದ ಸಿಬ್ಬಂದಿಯೇ ತಯಾರು ಮಾಡಿ, ಗಡಿಯಾರ ರಿಪೇರಿ ಸೈ ಎನಿಸಿಕೊಂಡಿದ್ದಾರೆ.
Kshetra Samachara
02/09/2021 06:09 pm