ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ರಸ್ತೆ ಹಣ ನುಂಗಿದ್ರಾ ಅಧಿಕಾರಿಗಳು ! ಏತಕ್ಕೆ ಜನರ ಹೋರಾಟ ?

ಕುಂದಗೋಳ : ಪಟ್ಟಣದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ದುರ್ವರ್ತನೆ ಖಂಡಿಸಿ ಹಾಗೂ ಕಳಪೆ ಕಾಮಗಾರಿಯಲ್ಲಿ ರಸ್ತೆ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿ ಗುಡಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಸರ್ವ ಸದಸ್ಯರು ಗ್ರಾಮಸ್ಥರು ನೇತೃತ್ವದಲ್ಲಿ ಗುಡಗೇರಿ ಗ್ರಾಮದಿಂದ ಪರ ಊರಿಗೆ ತೆರಳುವ ವಿವಿಧ ರಸ್ತೆ ತಡೆದು ಪ್ರತಿಭಟನೆ ಕೈಗೊಂಡಿದ್ದಾರೆ.

ಹೌದು ! ಗುಡಗೇರಿ ಗ್ರಾಮದಿಂದ ಹುಲಗೂರು ಸೇರಿದಂತೆ ಇತರೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಪ್ರವಾಹ ದುರಸ್ತಿ ಕಾಮಗಾರಿ ಕಳಪೆ ಆಗಿದ್ದು, ಅಧಿಕಾರಿಗಳು ರಸ್ತೆ ಮಂಜೂರಾದ ಹಣದಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದು, ಇಂದು ಬೆಳಿಗ್ಗೆಯಿಂದಲೇ ರಸ್ತೆ ತಡೆದು ಪ್ರತಿಭಟನೆ ಕೈಗೊಂಡಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಿಪಿಐ ಎನ್.ಎಮ್.ದೇಶನೂರು ಭೇಟಿ ನೀಡಿ ಪ್ರತಿಭಟನಾ ನಿರತರಿಗೆ ರಸ್ತೆ ಕಳಪೆ ಕಾಮಗಾರಿ ಹಾಗೂ ಭ್ರಷ್ಟಾಚಾರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳತ್ತೇವೆ ಎಂದರು ಮೇಲಾಧಿಕಾರಿಗಳು ಬರುವವರೆಗೆ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

Edited By : Manjunath H D
Kshetra Samachara

Kshetra Samachara

26/08/2021 12:26 pm

Cinque Terre

20.14 K

Cinque Terre

0

ಸಂಬಂಧಿತ ಸುದ್ದಿ