ಕುಂದಗೋಳ : ಅಬಾಬಾ ! ಈ ಕುಂದಗೋಳ ತಾಲೂಕಿನ ರಸ್ತೆಗಳ ಪರಿಸ್ಥಿತಿ ಏನ್ರೀ ರಸ್ತೆ ಯಾವಾಗ ಶುದ್ಧ ಅಕ್ಕಾಂವ್ ಜನಕ್ಕ ಯಾವಾಗ ಚಲೋ ರಸ್ತೆ ಸಿಗತಾವ್ ಅನ್ನೋದ್ ಕನಸಿನ ಮಾತ್ ಆಗೇತಿ ನೋಡ್ರೀ.
ಹೌದರೀ ! ಮತ್ತ್ ಈ ಶರೇವಾಡ ಗ್ರಾಮದಿಂದ ಹಲಗೂರು ತಲುಪುವ ಈ ರಸ್ತೆ ಮಳೆಗಾಲದಾಗ ಪೂರ್ತಿ ಕೆಸರು ನೀರು ಸಂಗ್ರಹವಾಗಿ ವಾಹನ ಸಂಚಾರಕ್ಕೆ ತೊಂದರೆ ಆಗತ್ತಿತ್ತು ಈಗ ಬೇಸಿಲ್ ಬಿದ್ದೈತಿ ಈ ಪಾಟಿ ಕೆಂಪು ಮಣ್ಣು ಧೂಳು ತುಂಬಿ ಜನ ಸಂಚಾರಕ್ಕೆ ಮಾರಕ ಆಗೇತಿ ಈ ತಗ್ಗು ಗುಂಡಿ ಅಂತು ಯಾವಾಗ ಎಲ್ಲಿ ಅಪಘಾತ ಮಾಡ್ತವೋ ಗೊತ್ತಿಲ್ಲ ಬಿಡಿ.
ಅದ್ಹಂಗ, ಈ ಎಲ್ಲಾ ದೃಶ್ಯಗಳನ್ನು ರಸ್ತೆ ಮೇಲೆ ಸಂಚರಿಸುವಂತಹ ವಾಹನ ಸವಾರರೇ ನಮಗೆ ವಿಡಿಯೋ ಕಳುಹಿಸಿ ಸಾರ್ ಈ ಪರಿಸ್ಥತಿ ಕೊನೆ ಯಾವಾಗ ? ಅಂತರಾ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೇ ಹಾಗೂ ಜನಪ್ರತಿನಿಧಿಗಳೇ ನೀವೂಮ್ಮೇ ಆ ರಸ್ತೆ ಪರಿಶೀಲನೆ ನಡೆಸಿ ಅಭಿವೃದ್ಧಿ ಕಲ್ಪಿಸಿ.
ಇದು ವೀಕ್ಷಕರ ವರದಿ
Kshetra Samachara
15/08/2021 03:58 pm