ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಏನ್ರೀ ಇದು ಸರ್ಕಾರಿ ಜಾಗದಲ್ಲಿ ಇಂತಹ ದುರಾವಸ್ಥೆ..?

ನವಲಗುಂದ : ನೀವು ನೋಡ್ತಾ ಇರೋದು ನವಲಗುಂದದ ಪಶು ಆಸ್ಪತ್ರೆ. ಇಲ್ಲಿ ಪಶುಗಳನ್ನು ಚಿಕಿತ್ಸೆಗಾಗಿ ಕರೆತರೋದಕ್ಕಿಂತ ಹೆಚ್ಚಾಗಿ ಸಾರ್ವಜನಿಕರು ಮೂತ್ರ ಮಾಡೋಕೆ ಮತ್ತು ಪಾರ್ಟಿ ಮಾಡೋಕೆ ಬಳಸೋದೇ ಹೆಚ್ಚು ಅನಿಸುತ್ತೆ.

ನವಲಗುಂದದ ತಾಲೂಕಾ ಪಶು ಆಸ್ಪತ್ರೆಯ ಆವರಣಕ್ಕೆ ರಾತ್ರಿ ಕುಡುಕರಷ್ಟೇ ಅಲ್ಲ..ಹಗಲು ಕುಡುಕರೂ ಸಹಿತ ಪೀಡೆ ಬೆನ್ನತ್ತಿದಂತೆ ಬೆನ್ನತ್ತಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಎಲ್ಲಿ ಬೇಕಲ್ಲಿ ಕುಡಿದು ಬಿಸಾಡಿದ ಬಾಟಲ್ ಗಳು ಎಲ್ಲೆಂದರಲ್ಲಿ ಬಿದ್ದಿವೆ. ಜತೆಗೆ ಇಲ್ಲಿ ರಾಜಾರೋಷವಾಗಿ ತಿರುಗುತ್ತಿರುವ ಹಂದಿಗಳನ್ನು ನೋಡಬಹುದು. ಇಷ್ಟೆಲ್ಲಾ ಅವ್ಯವಸ್ಥೆ ಈ ಪಶು ಆಸ್ಪತ್ರೆ ಆವರಣದಲ್ಲಿ ಇದೆ. ಆದ್ರೂ ಕೂಡ ಸರ್ಕಾರಿ ಜಾಗವನ್ನು ಈ ರೀತಿಯಾಗಿ ಅವ್ಯವಸ್ಥೆ ಮತ್ತು ಅಜಾಗರೂಕತೆಯಿಂದ ಇಟ್ಟಿದ್ದಾರೆ ಅಂದ್ರೆ ಇಲ್ಲಿನ ಪಶು ವೈದ್ಯಾಧಿಕಾರಿಗಳ ನಿರ್ಲಕ್ಷತನ ಎದ್ದು ಕಾಣುತ್ತಿದೆ.

ಇನ್ನು ಈ ಪ್ರದೇಶದ ಆಸುಪಾಸು ಪುರಸಭೆ ವತಿಯಿಂದ ಒಂದು ಮೂತ್ರಾಲಯವನ್ನಾದರೂ ನಿರ್ಮಿಸಬೇಕು. ಆಗಲಾದ್ರೂ ಇಲ್ಲಿನ ಅವ್ಯವಸ್ಥೆ ತಡೆಯಬಹುದು. ಈ ಕೂಡಲೇ ಪಶು ವೈದ್ಯಾಧಿಕಾರಿಗಳು ಮತ್ತು ಇದಕ್ಕೆ ಸಂಬಂಧ ಪಟ್ಟ ಮೇಲಾಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ.

Edited By : Manjunath H D
Kshetra Samachara

Kshetra Samachara

26/02/2021 04:02 pm

Cinque Terre

60.42 K

Cinque Terre

6

ಸಂಬಂಧಿತ ಸುದ್ದಿ