ಹುಬ್ಬಳ್ಳಿ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಜನವರಿ2021ರ ಮಾಹೆಯ ಪ್ರಗತಿ ವಿವರ ಬಿಡುಗಡೆ ಮಾಡಲಾಗಿದೆ. ಪ್ರಸಕ್ತ ಮಾಹೆಯಲ್ಲಿ 46 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 203 ಅಭ್ಯರ್ಥಿಗಳು ಉದ್ಯೋಗ ನೆರವಿಗಾಗಿ ನೊಂದಾಯಿಸಿಕೊಂಡಿದ್ದಾರೆ. ಕಚೇರಿಗೆ 3 ಹುದ್ದೆಗಳು ಅಧಿಸೂಚಿಸಲ್ಪಟ್ಟಿವೆ. 3 ಅಭ್ಯರ್ಥಿಗಳನ್ನು ಪುರಸ್ಕರಣೆ ಮಾಡಲಾಗಿದ್ದು, ಒಬ್ಬರು ಕೆಲಸ ಪಡೆದಿದ್ದಾರೆ.
7504 ಪುರುಷ, 3545 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 11049 ಅಭ್ಯರ್ಥಿಗಳು ಉದ್ಯೋಗ ನೆರವಿಗಾಗಿ ಕಾಯುತ್ತಿದ್ದಾರೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕ ಪ್ರಾಣೇಶ ಪ್ರಕಟಣೆ ತಿಳಿಸಿದ್ದಾರೆ.
Kshetra Samachara
08/02/2021 06:11 pm