ಕುಂದಗೋಳ : ಅತಿವೃಷ್ಟಿ ಪರಿಣಾಮ ಕಿತ್ತೋದ ರಸ್ತೆ ಪ್ಯಾಚ್ ವರ್ಕ್ ಕಾಮಗಾರಿಯೊಂದು ಆರಂಭ ಕಂಡು ಮತ್ತೆ ಕ್ಲೋಸ್ ಆಗಿದ್ದು ವಾಹನ ಸವಾರರಿಗೆ ಡಾಂಬರ್ ಕಿತ್ತ್ಹೋದ ಕಳಪೆ ರಸ್ತೆ ಸಂಚಾರ ಅನಿವಾರ್ಯವಾಗಿದೆ.
ಕುಂದಗೋಳ ಪಟ್ಟಣದಿಂದ ಅಲ್ಲಾಪೂರ ಮಾರ್ಗವಾಗಿ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ 7 ಕಿ.ಮೀ ರಸ್ತೆ ಈ ಹಿಂದೆ ಸುರಿದ ಮಳೆಯ ಅವಾಂತರದ ಅತಿವೃಷ್ಟಿ ಪರಿಸ್ಥಿತಿಗೆ ಸಿಲುಕಿ ರಸ್ತೆ ಅವ್ಯವಸ್ಥೆಯ ಹಾದಿ ಹಿಡಿದು ಹಾಳಾಗಿತ್ತು.
ಈ ಬಗ್ಗೆ ಶಾಸಕರ ಪ್ರವಾಹಕ್ಕೆ ಇಡಾದ ರಸ್ತೆ ದುರಸ್ತಿ ಕಾಮಗಾರಿ ಯೋಜನೆಯಡಿ ರಸ್ತೆ ಪ್ಯಾಚ್ ವರ್ಕ್ ಕಾಮಗಾರಿ ಗುತ್ತಿಗೆದಾರರು ಹಣ ಸಾಲುವುದಿಲ್ಲ ಎಂದು ದೊಡ್ಡ ದೊಡ್ಡ ಗುಂಡಿ ಮುಚ್ಚು ಕಾರ್ಯ ಕೈಗೊಂಡಿದ್ದಾರೆ.
ಆದ್ರೆ ಅಲ್ಲಾಪೂರ ಕಡಪಟ್ಟಿ ಗ್ರಾಮಸ್ಥರು ಕೇವಲ ಪ್ಯಾಚ್ ವರ್ಕ್ ಕಾಮಗಾರಿ ನೆಪದಲ್ಲಿ ದೊಡ್ಡ ದೊಡ್ಡ ನಾಲ್ಕೈದು ಗುಂಡಿ ಮುಚ್ಚಿಬೇಡಿ ಸಂಪೂರ್ಣ ರಸ್ತೆಯ ಎಲ್ಲ ಗುಂಡಿ ಮುಚ್ಚುವಂತೆ ಆಗ್ರಹಿಸಿ ಗುತ್ತಿಗೆದಾರರನ್ನು ಮರಳಿ ಕಳುಹಿಸಿದ್ದಾರೆ.
ಈಗಾಗಲೇ ಹದಗೆಟ್ಟ ರಸ್ತೆಯಲ್ಲಿ ವಾಹನ ಸವಾರರು ಸೇರಿದಂತೆ ಚಕ್ಕಡಿ ಎತ್ತುಗಳು ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ ಈ ಬಗ್ಗೆ ರಸ್ತೆ ಸರಿಪಡಿಸುವಂತೆ ಜನತೆ ಒತ್ತಾಯಿಸಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗಮನಿಸಿ ತಾಲೂಕು ಪಟ್ಟಣ ಸಂಪರ್ಕ ಕಲ್ಪಿಸುವ ರಸ್ತೆ ಸುಧಾರಿಸಿ ಎಂದಿದ್ದಾರೆ.
Kshetra Samachara
06/02/2021 03:48 pm