ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಾರ್ಡ್ ನಂಬರ್‌ 62ರ ಸಮಸ್ಯೆ ನೂರಾ ಹನ್ನೆರಡು; ಕಣ್ಣು ಮುಚ್ಚಿ ಕುಳಿತ ಕಾರ್ಪೊರೇಟರ್

ಹುಬ್ಬಳ್ಳಿ ಧಾರವಾಡ ಅವಳಿನಗರಕ್ಕೆ ಯಾರ ವಕ್ರದೃಷ್ಟಿ ಬಿದ್ದಿದೆಯೋ ಗೊತ್ತಿಲ್ಲ. ಚುನಾಯಿತ ಜನಪ್ರತಿನಿಧಿಗಳು ವಾರ್ಡ್‌ನಲ್ಲಿಯೇ ಇದ್ದರೂ ಮನೆಯ ಮುಂದಿನ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ. ಹಾಗಿದ್ದರೇ ಪಬ್ಲಿಕ್ ನೆಕ್ಸ್ಟ್ ನಿಮ್ಮ ಮನೆಯ ಮುಂದೆ ಬಂದಿದ್ದು, ಸಾರ್ವಜನಿಕರ ಸಮಸ್ಯೆ ಬಿಚ್ಚಿಡುತ್ತಿದೆ ನೋಡಿ..

ಎಲ್ಲೆಂದರಲ್ಲಿ ತುಂಬಿ ನಿಂತಿರುವ ಚರಂಡಿ, ಹರಿದು ಹೋಗಲು ಆಗದೆ ತಟಸ್ಥವಾಗಿರುವ ತ್ಯಾಜ್ಯ. ಕಾಂಕ್ರೀಟ್ ಹಾಗೂ ಡಾಂಬರು ಕಾಣದ ರಸ್ತೆಗಳು. ಮೂಲಭೂತ ಸೌಕರ್ಯಗಳೇ ಕಾಣದ ಸ್ಥಳೀಯರು ಈ ಎಲ್ಲ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ 62.

ಹೌದು. ಕಾಂಗ್ರೆಸ್ ಚುನಾಯಿತ ಕಾರ್ಪೊರೇಟರ್ ಸರತಾಜ್ ಶರೀಫ್ ಅದವಾನಿಯವರ ವಾರ್ಡ್ ಸಮಸ್ಯೆ ನಿಜಕ್ಕೂ ಹೇಳ ತೀರದಾಗಿದೆ. ಅಧಿಕಾರ ವಹಿಸಿಕೊಂಡು ಇಷ್ಟು ದಿನಗಳಾದರೂ ಇದುವರೆಗೂ ಈ ಸಮಸ್ಯೆಗಳಿಗೆ ಮುಕ್ತಿ ನೀಡಿಲ್ಲ. ಅದೆಲ್ಲ ಇರಲಿ ಸಮಸ್ಯೆ ಆಲಿಸುವ ಸೌಜನ್ಯ ಕೂಡ ಇಲ್ಲವಾಗಿದೆ. ಆದರೆ ಕಾರ್ಪೊರೇಟರ್ ಪತಿ ಮಾತ್ರ ತಾನೇ ಚುನಾಯಿತ ಜನಪ್ರತಿ ಎಂಬುವಂತೇ ಕೆಲಸವನ್ನು ಮಾಡದೇ, ಮಾಡಲೂ ಬಿಡದೇ ಕಾಲಹರಣ ಮಾಡುತ್ತಿದ್ದಾರೆ.

ಇನ್ನೂ 62ನೇ ವಾರ್ಡ್‌ನ ಜನರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದು, ಸದ್ಯಕ್ಕೆ ಹೊರಬರುವ ಲಕ್ಷಣಗಳು ಕಾಣುತ್ತಿಲ್ಲ. ಸುಮಾರು 50 ಲಕ್ಷ ಅನುದಾನ ಬಂದಿದ್ದರೂ ನಯಾ ಪೈಸೆ ಕೆಲಸ ಮಾತ್ರ ಆಗಿಲ್ಲ. ಇದರಿಂದ ಜನರು ಮೂಲಭೂತ ಸಮಸ್ಯೆಗಳ ಕೊರತೆ ಅನುಭವಿಸುತ್ತಿದ್ದಾರೆ. ಸಾಕಷ್ಟು ಸಮಸ್ಯೆಗಳಿದ್ದರೂ ಕಾರ್ಪೊರೇಟರ್ ಮಾತ್ರ ಕಣ್ಣು ತೆರೆದು ನೋಡುತ್ತಿಲ್ಲ. 62ನೇ ವಾರ್ಡಿನ ಕಾರ್ಪೊರೇಟರ್ ಸರತಾಜ್ ಅದವಾನಿ ಕಾಣುತ್ತಿಲ್ಲ. ಇಲ್ಲಿನ ಸಮಸ್ಯೆ ಎಂಬುವಂತಾಗಿದ್ದು, ಸಾರ್ವಜನಿಕರು ಸಮಸ್ಯೆ ಕುರಿತು ಅಳಲನ್ನು ತೋಡಿಕೊಂಡಿದ್ದಾರೆ.

ಹುಸಿ ಭರವಸೆ ನೀಡಿ ಯಾರೊಬ್ಬರ ಮನೆಯ ಬಿಡದೇ ಪ್ರಚಾರ ಮಾಡಿದ್ದ ಕಾರ್ಪೊರೇಟರ್ ಮನೆಗೆ ಹೋದರೇ ಇಲ್ಲಿನ ಜನರ ಸಮಸ್ಯೆ ಮಾತ್ರ ಬಗೆ ಹರಿಯುತ್ತಿಲ್ಲ. ರಸ್ತೆ, ಚರಂಡಿ, ಸ್ವಚ್ಛತೆಯ ಸಮಸ್ಯೆಯಿಂದ ಜನರು ತತ್ತರಿಸಿದ್ದು, ಚುನಾಯಿತ ಪ್ರತಿನಿಧಿಗೆ ಮಾತ್ರ ಸಾರ್ವಜನಿಕರ ಚಿಂತೆಯೇ ಇಲ್ಲವಾಗಿದೆ. ಹಂದಿ ಹಾಗೂ ಬೀದಿ ನಾಯಿಗಳ ಕಾಟಕ್ಕೆ ಬೇಸತ್ತ ಜನರು ಚುನಾಯಿತ ಪ್ರತಿನಿಧಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಒಟ್ಟಿನಲ್ಲಿ ಮಂಟೂರ ರೋಡ್ ಹಾಗೂ ಅಂಬೇಡ್ಕರ್ ಕಾಲೋನಿ ಸಮಸ್ಯೆಗಳ ಆಗರವಾಗಿದ್ದು, ಕಾಂಗ್ರೆಸ್ ಚುನಾಯಿತ ಜನಪ್ರತಿಯಿಂದ ಜನರು ಕಂಗಾಲಾಗಿದ್ದಾರೆ. ಸಾಂಕ್ರಾಮಿಕ ರೋಗದ ಬಾಧೆಯಿಂದ ಬೇಸತ್ತಿರುವ 62ನೇ ವಾರ್ಡ್ ಜನರು, ಹುಸಿ ಭರವಸೆ ನಂಬಿ ಬದುಕು ನಡೆಸುತ್ತಿದ್ದಾರೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

28/09/2022 05:33 pm

Cinque Terre

56.92 K

Cinque Terre

3

ಸಂಬಂಧಿತ ಸುದ್ದಿ