ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಇದು ರಾವಣರಾಜ್ಯ ಅಲ್ಲ! ಇದು ರೈತರ ರಾಜ್ಯ: ಲೋಕನಾಥ್ ಹೆಬಸೂರ

ನವಲಗುಂದ : ಕರ್ನಾಟಕ ಬಂದ್ ಬೆಂಬಲಕ್ಕೆ ರಾಜ್ಯ ಜಾತ್ಯಾತೀತ ಪಕ್ಷಾತೀತ ಮಹದಾಯಿ ಕಳಸಾ ಬಂಡೂರಿ ರೈತ, ಅಸಂಘಟಿತ ಕಾರ್ಮಿಕರ, ಮಹಿಳೆಯರ ರೈತ ಹೋರಾಟ ಒಕ್ಕೂಟ ಕೇಂದ್ರ ಸಮಿತಿ ನವಲಗುಂದ ಅಧ್ಯಕ್ಷರಾದ ಲೋಕನಾಥ ಹೆಬಸೂರ ಬಂದಗೆ ಬೆಂಬಲ ಸೂಚಿಸಿ ಮಾತನಾಡಿದವರು. ರಾಜ್ಯ ಹಾಗೂ ಕೇಂದ್ರದಲ್ಲಿ ಶ್ರೀರಾಮನ ಮತ್ತು ಸತ್ಯಹರಿಶ್ಚಂದ್ರನ ಹೆಸರು ಬಳಸಿ ಆಡಳಿತ ನಡೆಸುತ್ತಿರುವ ನೀವು ರೈತರಿಗೆ ಮೋಸ ಮಾಡುತ್ತಿರುವ ನಿಮ್ಮ ದುರಾಡಳಿತವನ್ನು ನಾಡಿನ ಸಮಸ್ತ ರೈತಬಾಂಧವರು ಎಂದಿಗೂ ಕ್ಷಮಿಸುವುದಿಲ್ಲ.

ಅಧಿಕಾರ ಇದೆ ಅಂತಾ ಆಡಳಿತ ದರ್ಪದಿಂದ ರಾವಣನ ತರ ಅಧಿಕಾರ ಚಲಾಯಿಸದೇ ಶ್ರೀರಾಮನ ತರಹ ಒಳ್ಳೆ ಕೆಲಸಗಳನ್ನು ಮಾಡಿ

ರೈತ ಕುಲಕ್ಕೆ ಮಾರಕವಾಗುವಂತಹ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆ ಅಂಗೀಕಾರ ಹಿಂಪಡೆಯಬೇಕು, ವಿದ್ಯುತ್ ಕಾಯ್ದೆ ತಿದ್ದುಪಡಿ ಕೈಬಿಡಬೇಕು, ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆ ವಿಳಂಬ ಯಾಕೆ? ಬೆಣ್ಣಿಹಳ್ಳ ತುಪ್ಪರಿಹಳ್ಳ ಪ್ರವಾಹಕ್ಕೆ ಬೆಳೆ ನಾಶದ ರೈತರಿಗೆ ಪರಿಹಾರ ಹಣ ನೀಡದೇ ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತರುತ್ತಿರುವುದನ್ನು ನಿಮ್ಮ ಆಡಳಿತಕ್ಕೆ ರೈತ ಕುಲ ಹಿಡಿಶಾಪ ಹಾಕುತ್ತಿದ್ದಾರೆ.

ಎಲ್ಲ ಬೇಡಿಕೆಗಳನ್ನು ಹಿಂಪಡೆಯದಿದ್ದರೆ ಮುಂದಿನ ದಿನಮಾನದಲ್ಲಿ ಮತ್ತೊಮ್ಮೆ ರೈತ ಬಂಡಾಯ ಅನಿವಾರ್ಯ ಎಂದು ಹೇಳಿ ತಹಸೀಲ್ದಾರ್ ಮುಖಾಂತರ ಮಾನ್ಯ ಪ್ರಧಾನ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಲೋಕನಾಥ ಹೆಬಸೂರ, ಡಿ. ಎಮ್. ಶಲವಡಿ, ಡಿ. ಜಿ. ಹೆಬಸೂರ, ಅರ್ಜುನಪ್ಪ ಮೂಲಿಮನಿ, ಸಿದ್ದಪ್ಪ ಕಂಬಳಿ, ವೀರಯ್ಯ ಹಿರೇಮಠ, ಎಚ್.ಆರ್. ಬನೇನವರ ಅನೇಕ ರೈತರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

28/09/2020 04:07 pm

Cinque Terre

13.54 K

Cinque Terre

2

ಸಂಬಂಧಿತ ಸುದ್ದಿ