ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಸುರಿದ ಬಾರಿ ಮಳೆಗೆ ಹಳೇ ಹುಬ್ಬಳ್ಳಿಯ ಆನಂದನಗರದ ಗಣೇಶನಗರ 2ನೇ ಕ್ರಾಸ್ ನಲ್ಲಿ ಮನೆಗಳ ಮುಂದೆ ಬಾರಿ ಪ್ರಮಾಣದ ನೀರು ನಿಂತಿದ್ದು,ನಡುಗಡ್ಡೆಯಂತಾಗಿದ್ದು,ಸಾರ್ವಜನಿಕರು ಪರದಾಡುವಂತಾಯಿತು.
ಸುಮಾರು ಮೂವತ್ತು ಮನೆಗಳಿಗೆ ನೀರು ನುಗ್ಗಿದ್ದು,ಸಾರ್ವಜನಿಕರು ಮಳೆ ನೀರನ್ನು ಹೊರಹಾಕಲು ಹರಸಾಹಸ ಪಡುತ್ತಿದ್ದಾರೆ.ಚರಂಡಿ ತುಂಬಿದ್ದು, ಮಳೆನೀರು ಸಮರ್ಪಕವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದ್ದರಿಂದ ಮಳೆ ನೀರು ಮನೆಮುಂದೆ ನಿಂತು ಹಳೇ ಹುಬ್ಬಳ್ಳಿಯಲ್ಲಿ ನಡುಗಡ್ಡೆಯಂತೆ ಗೋಚರಿಸಿದ್ದಂತೂ ಸತ್ಯ.
ಇನ್ನೂ ಬಿಡದೇ ಸುರಿಯುತ್ತಿರುವ ಮಳೆಯಿಂದ ಈಗಾಗಲೇ ಬೇಸರಗೊಂಡಿರುವ ಜನರಿಗೆ ವಿಪರೀತ ಮಳೆಯಿಂದ ಸಂಕಷ್ಟ ಅನುಭವಿಸುವಂತಾಗಿದೆ.
Kshetra Samachara
20/10/2020 08:38 pm