ಕುಂದಗೋಳ : ನಿತ್ಯ ಹಗಲಿರಲಿ ರಾತ್ರಿಯಾಗ್ಲಿ ಇಲ್ಲಿನ ಜನರಿಗೆ ನಾಯಿಗಳ ಕೂಗಾಟ ಬೋಗಳಿಕೆ ಸದ್ದು ಸಾಕಾಗಿ ಹೋಗಿದ್ದು, ಹೇಗಾದ್ರೂ ಮಾಡಿ ನಾಯಿ ಕಾಟಕ್ಕೆ ಬ್ರೇಕ್ ಹಾಕಿ ಊರಿಂದ ಓಡ್ಸಿ ಎನ್ನುತ್ತಿದ್ದಾರೆ.
ಕುಂದಗೋಳ ಪಟ್ಟಣದ ಬೀದಿ ಬೀದಿ ಬಸ್ ನಿಲ್ದಾಣ ಎಲ್ಲೇ ನೋಡಿದರಲ್ಲಿ ನಾಯಿಗಳದ್ದೇ ದರ್ಬಾರ, ಈ ಪಾಟಲಿಗೆ ಜನ ಬೇಸತ್ತು ಚಿಕ್ಕ ಮಕ್ಕಳು ಹೊರಗೆ ಓಡಾಡೋ ಹಾಗಿಲ್ಲ, ರಸ್ತೆ ಮದ್ಯ ವಾಹನ ಚಲಿಸುವಾಗ ಎಚ್ಚರ ತಪ್ಪೋ ಹಾಗಿಲ್ಲ ಸ್ವಲ್ಪ ಯಾಮಾರಿದ್ರೂ ಸರಕ್ಕನೆ ಓಡಿ ಬರೋ ನಾಯಿಗಳು ಏನು ಅಪಾಯ ಸೃಷ್ಟಿಸಿ ಬಿಡ್ತವೋ ? ಎಂಬ ಭಯ ಸಾರ್ವಜನಿಕರಿಗೆ ಕಂಟಕವಾಗಿದೆ. ಈ ಬಗ್ಗೆ ಜನ ಎನ್ ಹೇಳ್ತಾರೆ ಕೇಳಿ.
ಸಾರ್ವಜನಿಕರೇ ಹೇಳೋ ಪೈಕಿ ನಾಯಿಗಳ ಓಡಾಟದಿಂದ ವಾಹನಗಳ ಅಪಘಾತ ಉಂಟಾಗಿವೆಯಂತೆ. ಕುಂದಗೋಳ ಪಟ್ಟಣದ ಬಸ್ ನಿಲ್ದಾಣ, ಹರಭಟ್ಟ ಶಾಲೆ ಕಾಂಪೌಂಡ್, ತಾಲೂಕು ಕಚೇರಿ, ಮಾರ್ಕೇಟ್, ರೇಲ್ವೆ ಸ್ಟೇಷನ್ ರೋಡ್ ಹೀಗೆ ಎಲ್ಲೇಂದರಲ್ಲಿ ಓಡಾಡುವ ನಾಯಿಗಳ ಕಾಟಕ್ಕೆ ಪಟ್ಟಣ ಪಂಚಾಯಿತಿ ಏನಾದ್ರೂ ಕ್ರಮ ಕೈಗೊಳ್ಳಲಿ ಎಂದು ಸಾರ್ವಜನಿಕರು ಕೇಳಿಕೊಳ್ಳುತ್ತಿದ್ದಾರೆ.
Kshetra Samachara
04/01/2021 08:25 pm