ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಪಾಯದಲ್ಲಿದ್ದ ಮರವನ್ನು ತೆರವುಗೋಳಿಸಿದ ಪಾಲಿಕೆ ಅಧಿಕಾರಿಗಳು

ಹುಬ್ಬಳ್ಳಿ- ನಿಮ್ಮ ಪಬ್ಲಿಕ್ ನೆಕ್ಸ್ಟ್ ನ ಮತ್ತೊಂದು ಇಂಪ್ಯಾಕ್ಟ್. ಸುದ್ದಿ ಪ್ರಸಾರವಾದ ಕೆಲವೇ ಸಮಯಕ್ಕೆ ಸಮಸ್ಯೆಗೆ ಪರಿಹಾರ ದೊರತಿದೆ.

ಹುಬ್ಬಳ್ಳಿಯ ಪಾಲಿಕೆಯ ಉದ್ಯಾನವನದಲ್ಲಿ ಈ ಹಿಂದೆ ಮರವನ್ನು ಪಾಲಿಕೆ ತೋಟಗಾರಿಕೆ ಇಲಾಖೆಯ ಸಿಬ್ಬಂದಿಗಳು ಮರವನ್ನು ಅರ್ಧಂಬರ್ಧ ಕಡಿದು ಬಿಟ್ಟಿದ್ದರು. ಆ ಮರ ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೀಳುವ ಹಂತಕ್ಕೆ ತಲುಪಿತ್ತು.

ಈ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ "ಪಾಲಕರೆ ಹುಷಾರ್ ನಿಮ್ಮ ಮಕ್ಕಳನ್ನು ಪಾಲಿಕೆ ಗಾರ್ಡನ್ ದಲ್ಲಿ ಆಟ ಆಡಲು ಬೀಡಬೇಡಿ" ಎಂಬ ಶೀರ್ಷಿಕೆ ಅಡಿಯಲ್ಲಿ ವರದಿಯನ್ನು ಬಿತ್ತರಿಸಿತ್ತು.

ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ, ಕೂಡಲೆ ಕಾರ್ಯ ಪ್ರವೃತ್ತರಾಗಿ ಪಾಲಿಕೆ ಸಿಬ್ಬಂದಿಗಳಿಂದ ಮರವನ್ನು ಪೂರ್ಣವಾಗಿ ತೆರವಿಗೆ ಸೂಚಿಸಿದ್ದಾರೆ.

ಇನ್ನು ಸ್ಥಳಕ್ಕೆ ದೌಡಾಯಿಸಿದ ಪಾಲಿಕೆ ಸಿಬ್ಬಂದಿ ಮರವನ್ನು ತೆರವುಗೊಳಿಸಿದ್ದಾರೆ. ಈ ವರದಿ ಭಿತ್ತರಿಸಿ ಮುಂದಾಗುತ್ತಿದ್ದ ಅನಾಹುತ ತಪ್ಪಿಸಿದ ಪಬ್ಲಿಕ್ ನೆಕ್ಸ್ಟ್ ಗೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.....

Edited By :
Kshetra Samachara

Kshetra Samachara

23/09/2020 07:21 pm

Cinque Terre

28.23 K

Cinque Terre

5

ಸಂಬಂಧಿತ ಸುದ್ದಿ