ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅವ್ಯವಸ್ಥೆ ಸರಿದೂಗಿಸಲು ಕಿಮ್ಸ್ ಹೊಸ ಪ್ಲ್ಯಾನ್: ಸಿಬ್ಬಂದಿ ಮೇಲೆ ಹದ್ದಿನ ಕಣ್ಣಿಡಲು ಜಿಯೋ ಫೆನ್ಸಿಂಗ್

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಸಂಜೀವಿನಿ ಅಂತಾ ಕರೆಸಿಕೊಳ್ಳುವ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರ ಕರ್ತವ್ಯದ ವಿಚಾರದಲ್ಲಿ ಬೇಜಾವಾಬ್ದಾರಿ ನಡೆಯನ್ನು ಇತ್ತೀಚೆಗಷ್ಟೆ ಕೇಂದ್ರ ಸಚಿವರೇ ಕಿಡಿಕಾರಿದ್ದರು.‌

ಕಿಮ್ಸ್ ಆಸ್ಪತ್ರೆಯಲ್ಲಿ ಸುಮಾರು 900 ಕ್ಕೂ ಅಧಿಕ ಸಿಬ್ಬಂಧಿ ಹಾಗೂ ವೈದ್ಯಾಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ. ಆದರೆ ರಾಜ್ಯದಲ್ಲೇ ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ಹೊಂದಿರುವ ಕಿಮ್ಸ್ ಆಸ್ಪತ್ರೆಯಲ್ಲಿ ಆ ವೈದ್ಯರು ಪ್ರತಿ ತಿಂಗಳು ಸರ್ಕಾರದಿಂದ ಲಕ್ಷ ಲಕ್ಷ ಸಂಬಳ ತೆಗೆದುಕೊಂಡು ಕರ್ತವ್ಯಕ್ಕೆ ಹಾಜರಾಗೋದಿಲ್ಲ ಎಂಬ ಗಂಭೀರ ಆರೋಪವನ್ನು ಇತ್ತೀಚೆಗೆ ಸ್ವತಃ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರೇ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಿಮ್ಸ್ ಆಸ್ಪತ್ರೆಯ ಆಡಳಿತ ಮಂಡಳಿಗೆ ಇಲ್ಲಿನ ವೈದ್ಯರ ಮೇಲೆ ನಿಗಾ ಇಡುವಂತೆ ಸೂಚಿಸಿದ ಹಿನ್ನೆಲೆ ಇದೀಗ ವೈದ್ಯರ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಜಿಯೋ ಫೆನ್ಸಿಂಗ್ ಎಂಬ ನೂತನ ಪ್ಲಾನ್ ಗೆ ಕಿಮ್ಸ್ ಚಿಂತನೆ ನಡೆಸಿದೆ.

ಇನ್ನೂ ಈ ಜಿಯೋ ಫೆನ್ಸಿಂಗ್ ಅನ್ನು ಪ್ರತಿಯೊಬ್ಬ ವೈದ್ಯರಿಗೆ ಟ್ಯಾಗ್ ಅಳವಡಿಕೆ ಮಾಡುವ ಮೂಲಕ ಅವರ ಮೇಲೆ ನಿಗಾ ವಹಿಸಲು ರಾಜ್ಯ ಸರ್ಕಾರ ಹಾಗೂ ಕಿಮ್ಸ್ ಆಡಳಿತ ಮಂಡಳಿ ಚಿಂತನೆ ನಡೆಸಿದೆ. ಈ ಬಗ್ಗೆ ಮಾಜಿ ಸಚಿವ ಸುಧಾಕರ ಅವರು ಸ್ವತಃ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸೂಚನೆಯನ್ನ ನೀಡಿ ಹೋಗಿದ್ದರು. ಆದ್ರೆ ಇದೀಗ ಸಿಎಂ ಬದಲಾವಣೆಯ ನಂತರ ಸಚಿವರೇ ಇಲ್ಲದ ಹಿನ್ನೆಲೆ ಈ ನೂತನ‌ ಪ್ಲಾನ್ ಕೇವಲ ಪ್ಲಾನ್ ಆಗಿಯೇ ಉಳಿದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಗಾಗಿಯೇ ಕಿಮ್ಸ್ ಆಡಳಿತ ಮಂಡಳಿ ಕಾಯುತ್ತಿದ್ದು, ಸರ್ಕಾರದ ಸೂಚನೆಯ ಬೆನ್ನಲ್ಲೇ ಈ ಪ್ಲಾನ್ ಅಳವಡಿಕೆಗೆ ಕಿಮ್ಸ್ ಮುಂದಾಗಲಿದೆ.

ಒಟ್ಟಾರೆ ಪ್ರತಿ ತಿಂಗಳು ಲಕ್ಷ ಲಕ್ಷ ಸಂಬಳ ಪಡೆದು ಕರ್ತವ್ಯ ನಿಷ್ಠೆಯನ್ನೇ ಮರೆತು ರೋಗಿಗಳ ಆರೈಕೆಗೆ ಮುಂದಾಗದೇ ಸರ್ಕಾರದ ಕಣ್ಣಿಗೆ ಮಣ್ಣೆರಚುವ ವೈದ್ಯರ ಮೇಲೆ ನಿಗಾ ವಹಿಸಿ ಕರ್ತವ್ಯ ಪ್ರಜ್ಞೆ ಮೆರೆಯುವಂತಹ ಸರ್ಕಾರದ ಹಾಗೂ ಕಿಮ್ಸ್ ನ‌ ಈ ನೂತನ ಪ್ಲಾನ್ ಆದಷ್ಟು ಶೀಘ್ರ ಜಾರಿಯಾಗಲಿ. ಬಡಜನರ ಹಿತ ಕಾಪಾಡುವಲ್ಲಿ ವೈದ್ಯರು ಮುಂದಾಗಲಿ ಎನ್ನುವುದೆ ನಮ್ಮ ಆಶಯ.

ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ...!

Edited By : Shivu K
Kshetra Samachara

Kshetra Samachara

09/08/2021 10:34 am

Cinque Terre

34.36 K

Cinque Terre

1

ಸಂಬಂಧಿತ ಸುದ್ದಿ