ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಅಭ್ಯಾಸಕ್ಕಾಗಿ ಬಸ್ಸನ್ನೆ ನಿಲ್ಲಿಸಿ ಬಿಟ್ರಪ್ಪಾ ಈ ವಿದ್ಯಾರ್ಥಿನಿಯರು

ಕುಂದಗೋಳ : ಶಾಲಾ ಕಾಲೇಜು ಆರಂಭವಾಗಿವೆ, ಈ ಹಿಂದೆ ನಮ್ಮೂರ ಮೇಲೆ ಸಂಚಾರ ಮಾಡ್ತಿದ್ದ ಬಸ್ ನಿಲ್ಲಿಸಿದ್ದೀರಿ ನಾವು ಹೇಗೆ ಪಟ್ಟಣಕ್ಕೆ ಹೋಗೋದು ? ಹೇಗೆ ವಿದ್ಯಾಭ್ಯಾಸ ಮಾಡೋದು ? ಎಂದು ಕಾಲೇಜು ವಿದ್ಯಾರ್ಥಿನಿಯರೇ ಸಾರಿಗೆ ಬಸ್ ತಡೆದು ಪ್ರತಿಭಟಿಸಿದ ಘಟನೆ ‌ಸಂಶಿ ಗ್ರಾಮದ ಹಳೇ ಬಸ್ ನಿಲ್ದಾಣದಲ್ಲಿ ಇಂದು ನಡೆದಿದೆ.

ಹೋಬಳಿ ಗ್ರಾಮ ಸಂಶಿಗೆ ಬರೋ ಬಸ್ ಈ ಹಿಂದೆ ಹೊಸಳ್ಳಿ ಗ್ರಾಮದ ಮೇಲೆ ಹಾಯ್ದು ಹುಬ್ಬಳ್ಳಿ ತಲುಪುತಿತ್ತು, ಕೊರೊನಾ ಸಂದರ್ಭ ಬಸ್ ಬಂದ್ ಆದ ಕಾರಣ ಹೊಸಳ್ಳಿ ಮಾರ್ಗ ಸ್ಥಗಿತಗೊಳಿಸಿದ ಬಸ್ ನೇರ ಹಿರೇಗುಂಜಳ, ಯರೇಬೂದಿಹಾಳಕ್ಕಷ್ಟೇ ಸಂಚರಿಸುತ್ತಿದೆ.

ಈ ಪರಿಣಾಮ ಹೊಸಳ್ಳಿ ಗ್ರಾಮದ ವಿದ್ಯಾರ್ಥಿನಿಯರು ನಮ್ಮೂರಿಗೆ ಈ ಬಸ್ ಬಿಡಿ ಇಲ್ಲವಾದಲ್ಲಿ ನಾವು ಬಸ್ ಬಿಟ್ಟು ಹಿಂದೆ ಸರಿಯುವುದಿಲ್ಲ ಎಂದು ಬಸ್ ಮುಂದೆ ನಿಂತು ದಾರಿ ಬಿಡದೆ ಪ್ರತಿಭಿಟಿಸಿದ್ದಾರೆ, ಈ ವಿಷಯ ತಿಳಿದ ವಿದ್ಯಾರ್ಥಿಗಳ ಪಾಲಕರು ಸಹ ಮಕ್ಕಳಿಗೆ ಸಾಥ್ ನೀಡಿ ಧ್ವನಿ ಎತ್ತಿದ್ದಾರೆ.

ಕೊನೆಗೆ ಸ್ಥಳಕ್ಕಾಗಮಿಸಿದ ಕುಂದಗೋಳ ಪೊಲೀಸರು ಸಮಸ್ಯೆ ತಿಳಿಗೊಳಿಸಿ ವಿದ್ಯಾರ್ಥಿಗಳ ದೃಷ್ಟಿಯಿಂದ ಆ ಗ್ರಾಮಕ್ಕೂ ಬಸ್ ಬಿಡುವಂತೆ ಹೇಳಿದ್ದು ಈ ಬಗ್ಗೆ ಸಾರಿಗೆ ಅಧಿಕಾರಿಗಳು ಏನು ಕ್ರಮ ಕೈಗೊಳ್ಳತಾರೋ ಕಾದು ನೋಡಬೇಕು.

Edited By : Manjunath H D
Kshetra Samachara

Kshetra Samachara

07/01/2021 08:56 am

Cinque Terre

48.06 K

Cinque Terre

3

ಸಂಬಂಧಿತ ಸುದ್ದಿ