ಹುಬ್ಬಳ್ಳಿ- ವ್ಯಾಪಾರ ಮತ್ತು ವಹಿವಾಟವನ್ನು ಸರಳವಾಗಿ ಮಾಡಲು ವ್ಯಾಪಾರಸ್ಥರಿಗೆ ಆಮದು, ರಫ್ತು ಮಾಡಲು, ನಗರದ ಹಳೆಯ ವಿಮಾನ ನಿಲ್ದಾಣದ ಟರ್ಮಿನಲ್ ಡೊಮೆಸ್ಟಿಕ್ ಏರ್ ಕಾರ್ಗೋ ಟರ್ಮಿನಲ್ ( ಸರಕು ಸಾಗಣೆ ) ಆಗಿ ಪರಿವರ್ತನೆಯಾಗಿದ್ದು, ದೇಶದ ವಿವಿಧಡೆ ವ್ಯಾಪಾರ ಮಾಡಲು ದಲ್ಲಾಳಿ, ಉದ್ಯಮಿಗಳು , ರೈತರು ಮುಖದಲ್ಲಿ ಸಂತಸ ಮೂಡಿದೆ.
ನಾಗರಿಕ ವಿಮಾನಯಾನ ಸಚಿವಾಲಯ ಅನುಮೋದನೆ ನೀಡಿದ್ದು, ಇದರ ಕಾಮಗಾರಿ ಭರದಿಂದ ನಡೆದಿದೆ. ನಗರದ ವಿಮಾನ ನಿಲ್ದಾಣದ ಟರ್ಮಿನಲ್ ಡೊಮೆಸ್ಟಿಕ್ ಏರ್ ಕಾರ್ಗೋ ಟರ್ಮಿನಲ್ ನ, ಇದರ ಕಾಮಗಾರಿಯು ಭರದಿಂದ ಸಾಗಿದ್ದು ಜನವರಿ ಇಲ್ಲವೆ ಫೆಬ್ರವರಿಯಲ್ಲಿ ಕಾರ್ಯಾರಂಭಗೊಳ್ಳುವ ನಿರೀಕ್ಷೆಗಳಿವೆ.
ವಿಮಾನ ನಿಲ್ದಾಣದಿಂದ ದೇಶದ ವಿವಿಧೆಡೆ ಪ್ರಯಾಣಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜೊತೆಗೆ ಸರಕು ಸಾಗಾಟವೂ ಹೆಚ್ಚಳವಾಗುತ್ತಿದೆ. ನಗರದಲ್ಲಿ ನಿರ್ಮಿಸಲಾಗುತ್ತಿರುವ ಡೊಮೆಸ್ಟಿಕ್ ಏರ್ ಕಾರ್ಗೋ ಟರ್ಮಿನಲ್‌ಗೆ ಎರಡು ದಿನಗಳ ಹಿಂದೆ ಬ್ಯೂರೋ ಆಫ್ ಸಿವಿಲ್ ಎವಿಯೇಷನ್ ಸೆಕ್ಯುರಿಟಿ ಅಧಿಕಾರಿಗಳು ಭೇಟಿಕೊಟ್ಟು, ಸ್ಥಳ ಪರಿಶೀಲನೆ ಮಾಡಿದ್ದಾರೆ. ಕಾರ್ಗೋ ನಿಲ್ದಾಣಕ್ಕೆ ಅವಶ್ಯವಾದ ಮೂಲಸೌಕರ್ಯಗಳು ಹಾಗೂ ಭದ್ರತಾ ಪಡೆಯನ್ನು ಸಹ ಒದಗಿಸಲಾಗಿದೆ.
ಡೊಮೆಸ್ಟಿಕ್ ಏರ್ ಕಾರ್ಗೋ ಟರ್ಮಿನಲ್‌ನ ನಿರ್ವಹಣೆಯನ್ನು 3 + 4 ಬೇಸ್‌ಗಳಲ್ಲಿ ಸಿದ್ಧಗೊಳ್ಳುತ್ತಿದೆ. ಈ ಟರ್ಮಿನಲ್‌ದಲ್ಲಿ ಮೂರು ದೊಡ್ಡ ಕಾರ್ಗೋ ವಿಮಾನಗಳು ಹಾಗೂ ನಾಲ್ಕು ಚಿಕ್ಕ ಕಾರ್ಗೋ ವಿಮಾನಗಳ ನಿಲುಗಡೆ ಆಗಲಿವೆ. ಹೀಗೆ ಹುಬ್ಬಳ್ಳಿಯ ವ್ಯಾಪಾರಸ್ಥರು ಇನ್ನೂ ಮುಂದೆ ಸರಳವಾಗಿ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಾರ, ವಹಿವಾಟುವನ್ನು ಮಾಡಬಹುದಾಗಿದೆ.....
Kshetra Samachara
15/12/2020 07:11 pm