ನವಲಗುಂದ : ಸಾರಿಗೆ ನೌಕರರು ನಾಲ್ಕು ದಿನಗಳಿಂದ ನಡೆಸುತ್ತಿದ್ದ ಮುಷ್ಕರಕ್ಕೆ ಇಂದು ಪ್ರತಿಫಲ ಸಿಕ್ಕಿದ್ದು, ಪ್ರತಿಭಟನೆಯನ್ನು ಕೈ ಬಿಟ್ಟ ಚಾಲಕ ಮತ್ತು ನಿರ್ವಾಹಕರು ಇಂದು ಸಂಜೆ ವೇಳೆಗೆ ನವಲಗುಂದ ಬಸ್ ಡಿಪೋದಲ್ಲಿ ನಿಂತಿದ್ದ ಬಸ್ ಗಳನ್ನು ಹೊರತೆಗೆದಿದ್ದು, ಸಂಚಾರ ಆರಂಭ ಮಾಡಿದ್ದರು.
ಹೌದು ಕಳೆದ ನಾಲ್ಕು ದಿನಗಳಿಂದ ನವಲಗುಂದದ ಬಸ್ ನಿಲ್ದಾಣ ಬಸ್ ಮತ್ತು ಪ್ರಯಾಣಿಕರಿಲ್ಲದೆ ಬಿಕ್ಕೋ ಎನ್ನುತ್ತಿತ್ತು, ಆದರೆ ಇಂದು ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವುದಾಗಿ ಲಿಖಿತ ಭರವಸೆಯ ಪತ್ರವನ್ನು ನೀಡುತ್ತಲೇ ನವಲಗುಂದ ಬಸ್ ನಿಲ್ದಾಣದಲ್ಲಿ ಸಂಜೆ ವೇಳೆಗೆ ಬಸ್ ಗಳ ಸಂಚಾರ ಆರಂಭವಾಗಿದ್ದು, ಪ್ರಯಾಣಿಕರು ನಿಟ್ಟಿಸಿರು ಬಿಡುವಂತಾಗಿದೆ.
Kshetra Samachara
14/12/2020 08:34 pm