ಧಾರವಾಡ: ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿ ಸರ್ಕಾರಿ ನೌಕರರನ್ನಾಗಿ ಪರಿಗಣಿಸುವುದು, ಸರ್ಕಾರಿ ಸೌಲಭ್ಯ ಒದಗಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಮೂರನೇ ದಿನವು ಮುಂದುವರಿದಿದೆ. ಇದರಿಂದಾಗಿ ಧಾರವಾಡದ ಮದಿಹಾಳದಲ್ಲಿರುವ ಬಸ್ ಡಿಪೋದಲ್ಲಿ ನೂರಾರು ಸಾರಿಗೆ ಬಸ್‌ಗಳನ್ನು ಒಂದೆಡೆ ನಿಲ್ಲಿಸಲಾಗಿದೆ.
ಇತ್ತ ಇನ್ನೊಂದಡೆ ಪ್ರತಿಭಟನೆ ನಡೆಸುತ್ತಿರುವ ಸಾರಿಗೆ ನೌಕರರು,ಸರಕಾರ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಳಂಬ ಮಾಡದೆ ತ್ವರಿತವಾಗಿ ಕ್ರಮಕೈಗೊಳ್ಳಬೇಕು.ಇದರಿಂದ ನೌಕರರ ಜತೆಗೆ ಸಾರ್ವಜನಿಕರಿಗೂ ಅನುಕೂಲವಾಗಲಿದೆ ಎಂದು ಒತ್ತಾಯಿಸುತ್ತಿದ್ದಾರೆ.
ಸಾರಿಗೆ ಬಸ್‌ಗಳು ಸಂಚಾರ ನಡೆಸದ ಹಿನ್ನೆಲೆಯಲ್ಲಿ ಪ್ರಯಾಣಿಕರು ಆಟೋ, ಖಾಸಗಿ ವಾಹನಗಳ ಮೊರೆ ಹೋಗುವಂತಾಗಿತ್ತು. ಗ್ರಾಮೀಣ ಭಾಗಗಳಿಗೆ ತೆರಳುವ ಆಟೋಗಳ ಹೊರ ಭಾಗದಲ್ಲಿ ಜೋತು ಬಿದ್ದು ಹೋಗುವಷ್ಟರ ಮಟ್ಟಿಗೆ ಜನದಟ್ಟಣೆ ಉಂಟಾಗಿತ್ತು.
Kshetra Samachara
13/12/2020 01:34 pm