ನವಲಗುಂದ : ಇಕ್ಕಟ್ಟಾದ ರಸ್ತೆ, ರಸ್ತೆ ಮಧ್ಯದಲ್ಲಿ ಚರಂಡಿ ಕಾಮಗಾರಿಗಾಗಿ ಹಾಕಿದ ಮಣ್ಣು, ಚರಂಡಿಯಲ್ಲಿ ಹಾಯಾಗಿ ಮಲಗಿದ ಹಂದಿಗಳು ಇವೆಲ್ಲವೂ ಇಲ್ಲಿನ ಸ್ಥಳೀಯರ ಮತ್ತು ವಾಹನ ಸವಾರರ ಪರದಾಟಕ್ಕೆ ಪ್ರಮುಖ ಕಾರಣವಾಗಿವೆ.
ನವಲಗುಂದ ಪಟ್ಟಣದ ಬಸವೇಶ್ವರ ನಗರಕ್ಕೆ ಹೋಗುವ ದಾರಿ ಇದು, ಚರಂಡಿ ಕಟ್ಟೆ ಕುಸಿಯುತ್ತಿದ್ದ ಕಾರಣದಿಂದಾಗಿ ಇಲ್ಲಿ ಚರಂಡಿಯ ಮರು ನಿರ್ಮಾಣವಾಗುತ್ತಿದೆ.
ಆದರೆ ಮಣ್ಣನ್ನು ಹೀಗೆ ರಸ್ತೆ ಮಧ್ಯ ಹಾಕೋದು ಎಷ್ಟರ ಮಟ್ಟಿಗೆ ಸರಿ ಎಂಬುದು ಸ್ಥಳೀಯರ ಪ್ರಶ್ನೆ..? ಇನ್ನೂ ಇದರಿಂದಾಗಿ ರಸ್ತೆ ಇಕ್ಕಟ್ಟಾಗಿ ವಾಹನ ಸಂಚಾರಕ್ಕೂ ತೊಂದರೆ ಉಂಟಾಗಿದೆ ಅಷ್ಟೇ ಅಲ್ಲದೇ ರಸ್ತೆಯ ಉದ್ದಕ್ಕೂ ಇರುವ ಚರಂಡಿ, ಹಂದಿಗಳ ವಾಸಸ್ಥಾನವಾಗಿ ಮಾರ್ಪಟ್ಟಿರೋದು ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗದ ಭೀತಿ ಶುರುವಾಗಿದೆ.
ಚರಂಡಿ ಕಾಮಗಾರಿಯನ್ನು ಬೇಗ ಪೂರ್ತಿ ಮಾಡಿ, ರಸ್ತೆ ಅಗಲಿಕರಣ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಿ ಜೊತೆಗೆ ಇರುವ ಚರಂಡಿಯನ್ನು ವ್ಯವಸ್ಥಿತವಾಗಿ ಕಲ್ಪಿಸಿಕೊಡಿ ಎಂಬುವುದು ಸ್ಥಳೀಯರ ಆಗ್ರಹ.
Kshetra Samachara
29/11/2020 07:32 pm