ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಕಸದ ತೊಟ್ಟಿಯಾಗಿ ಬದಲಾದ ನವಲಗುಂದ ಎಪಿಎಂಸಿ

ನವಲಗುಂದ : ದೀಪಾವಳಿ ಹಬ್ಬದ ಹಿನ್ನಲೆ ನವಲಗುಂದದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಬ್ಬು ಮತ್ತು ಬಾಳೆ ಗಿಡದ ವ್ಯಾಪಾರ ಜೋರಾಗಿಯೇ ಇತ್ತು, ಆದರೆ ಈಗ ಈ ಮಾರುಕಟ್ಟೆ ಅಕ್ಷರಶಃ ಕಸದ ತೊಟ್ಟಿಯಾಗಿ ಬದಲಾಗಿದೆ.

ಹೌದು ಹಬ್ಬಕ್ಕಾಗಿ ಈ ಮಾರುಕಟ್ಟೆಯಲ್ಲಿ ಕಬ್ಬು ಮತ್ತು ಬಾಳೆ ಗಿಡದ ಮಾರಾಟ ಭರ್ಜರಿಯಾಗಿಯೇ ನಡೆದಿತ್ತು, ಜನರು ಇಲ್ಲಿ ಕಬ್ಬು ಮತ್ತು ಬಾಳೆ ಗಿಡವನ್ನು ಖರೀದಿಗಾಗಿ ಸಾಗರೋಪಾದಿಯಲ್ಲಿ ಬಂದಿದ್ದು, ಈಗ ಇದರ ಪರಿಣಾಮ ಹಬ್ಬದ ಮರುದಿನವಾದ ಇಂದು ಈ ಮಾರುಕಟ್ಟೆ ಕಸದ ತಿಪ್ಪೆಯಾಗಿ ಪರಿಣಮಿಸಿದೆ.

ಇನ್ನೂ ಈ ಕಸದಲ್ಲಿ ವಿಷ ಜಂತುಗಳೆನಾದರೂ ಸೇರಿ ಕೊಂಡ್ರೆ ಇಲ್ಲಿ ಸಂಚರಿಸೋ ಜನರಿಗೆ ಅಪಾಯವಂತೂ ಕಟ್ಟಿಟ್ಟ ಬುತ್ತಿ, ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸ್ವಚ್ಛತೆ ಕಡೆಗೆ ಗಮನ ಹರಿಸಬೇಕಿದೆ...

Edited By :
Kshetra Samachara

Kshetra Samachara

17/11/2020 10:08 pm

Cinque Terre

19.59 K

Cinque Terre

0

ಸಂಬಂಧಿತ ಸುದ್ದಿ