ಕುಂದಗೋಳ : ಈ ಹಿಂದೆ ಪುರಾತನ ಕಾಲದಲ್ಲಿ ಬಂಕಾಪೂರ ನವಾಬರು ಶಿರಹಟ್ಟಿ ಸ್ವಾಮಿಗಳ ದರ್ಶನಕ್ಕಾಗಿ ನಡೆದಂತಹ 5 ಕಿ.ಮೀ ದೊಡ್ಡದಾರಿ ಇಂದು ಅಲ್ಲಿನ ರೈತರಿಗೆ ನಡೆಯಲು ಭಾರತದಂತಹ ದುಸ್ಥಿತಿ ತಲುಪಿದ್ದು ಈ ವ್ಯವಸ್ಥೆಯನ್ನ ಯಾವ ಅಧಿಕಾರಿಗಳು ಜನಪ್ರತಿನಿಧಿಗಳು ಗಮನಿಸಿದ ಕಾರಣ ಗ್ರಾಮಸ್ಥರೇ ರಸ್ತೆ ಅಭಿವೃದ್ಧಿ ಪಡಿಸಿಕೊಂಡಿದ್ದಾರೆ.
ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮಸ್ಥರು ದೊಡ್ಡದಾರಿಗೆ ಹೊಂದಿಕೊಂಡಿರುವ ಹೊಲಗಳ ಮಾಲೀಕರಿಂದ ಜಮೀನಿನ ವಿಸ್ತೀರ್ಣದ ಅನುಸಾರ ವಂತಿಗೆ ಹಣ ಸಂಗ್ರಹಿಸಿ ಐದು ಕಿ.ಮೀ ದಾರಿಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿಕೊಂಡಿದ್ದಾರೆ. ಈ ಹಿಂದೆ ಇದೇ ಗ್ರಾಮಸ್ಥರು ಹಾಲಕೇರಿ ರಸ್ತೆಯನ್ನ ತಮ್ಮ ಸ್ವಂತ ಹಣದಿಂದ ಅಭಿವೃದ್ಧಿ ಪಡಿಸಿಕೊಂಡು ಸುದ್ದಿಯಾಗಿದ್ದರು.
Kshetra Samachara
06/11/2020 11:18 am