ಕುಂದಗೋಳ : ಪಟ್ಟಣದಲ್ಲಿ ಸುತ್ತ ಹಳ್ಳಿಗರ ಮಕ್ಕಳಿಗೆ ವರವಾಗಿ ಶಿಕ್ಷಣ ಜ್ಞಾನ ನೀಡುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 2014 ರಲ್ಲಿ ಕೇವಲ 26 ಮಕ್ಕಳಿಂದ ಆರಂಭವಾಗಿ ಸದ್ಯ 462 ವಿದ್ಯಾಭ್ಯಾಸ ನೀಡುತ್ತಿರುವ ಕಾಲೇಜು ಶಿಕ್ಷಣ ಇಲಾಖೆಯ ಕಣ್ಣಿಗೆ ಕಾಣದೆ ನಿರ್ವಹಣೆ ಕೊರತೆಯಿಂದ ಬಳಲಿದೆ.
ಕುಂದಗೋಳ ಪಟ್ಟಣದಲ್ಲಿ ಬಹು ಮುಖ್ಯ ಬೇಡಿಕೆಗಳಲ್ಲಿ ಒಂದಾದ ಪದವಿ ಕಾಲೇಜು ಆರಂಭಿಸುವ ಬಗ್ಗೆ ನಡೆದ ಚಿಂತನೆಗೆ ಶ್ರಿ.ಷ.ಬ.ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಪಂಚಗ್ರಹ ಹಿರೇಮಠ ಭೂದಾನ ನೀಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ಕಲ್ಪಿಸಿದ್ದು ಸದ್ಯ ಆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಅವ್ಯವಸ್ಥೆ ಹಾದಿ ಹಿಡಿದಿದ್ದು ಕಾಲೇಜು ಆವರಣದ ತುಂಬೆಲ್ಲ ನಿರ್ವಹಣೆ ಕಾಣದೆ ಕಸ ಬೆಳೆದಿದ್ದು ದನ ಕರುಗಳ ಮೇಯ ಹತ್ತಿವೆ.
ಕಟ್ಟಡ ಹಾಗೂ ಒಳಾಂಗಣದಲ್ಲಿನ ಮೇಲ ಹಾಸು ಕಲ್ಲುಗಳು ಬಿರುಕು ಬಿಟ್ಟು ಕೀಳುವ ಹಂತದಲ್ಲಿವೆ, ಸರ್ಕಾರಿ ಕಾಲೇಜಿನ ಸಭಾಂಗಣ ಕಟ್ಟೆಯ ಮುಂದೆ ಹುಲ್ಲಿನ ರಾಶಿ ಬಿದ್ದಿದ್ದು ಅಲ್ಲಿಯೂ ಸಹ ನಿರ್ವಹಣೆ ಇಲ್ಲದೆ ಕಸ ಬೆಳೆದಿದೆ ಇನ್ನು ಕಟ್ಟಡದ ಕಿಟಕಿಯ ಗ್ಲಾಸುಗಳು ಕೀಡಿಗೇಡಿಗಳ ಕಾಟದಿಂದ ಒಡೆದು ಹೋಗಿವೆ ಈ ಅವ್ಯವಸ್ಥೆ ತಕ್ಷಣ ಕಾಲೇಜು ಆರಂಭವಾದ್ರೇ ಮಕ್ಕಳ ಶಿಕ್ಷಣಕ್ಕೆ ಮಾರಕವಾಗಿದ್ದು ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಮೇಲಾಧಿಕಾರಿಗಳಿಗೆ ಪತ್ರ ಮನವಿ ಮಾಡುತ್ತಲಿದ್ದರು ಅಭಿವೃದ್ಧಿ ಮಾರ್ಗ ಕಂಡಿಲ್ಲ.
Kshetra Samachara
03/11/2020 08:29 pm