ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
ಕುಂದಗೋಳ : ಇಡೀ ಕುಂದಗೋಳ ತಾಲೂಕಿಗೆ ಬೆಳಕು ನೀಡುವ ಕಚೇರಿಯೊಂದು ತನ್ನ ಒಡಲಲ್ಲೇ ಅನೈರ್ಮಲ್ಯ ತುಂಬಿಕೊಂಡಿದ್ದು ಅಲ್ಲಿನ ಸಿಬ್ಬಂದಿ ಸೇರಿದಂತೆ ಸಾರ್ವಜನಿಕ ಆರೋಗ್ಯಕ್ಕೂ ಮಾರಕವಾದ ವಾತಾವರಣ ಹೊಂದಿ ಅವ್ಯವಸ್ಥೆಯ ಹಾದಿ ಹಿಡಿದಿದೆ.
ಕುಂದಗೋಳ ಪಟ್ಟಣದ ವಿದ್ಯುತ್ ಶಾಖಾಧಿಕಾರಿಗಳ ಕಾರ್ಯ ಪಾಲನಾ ಕಚೇರಿಯ ಸುತ್ತ ಎಲ್ಲಿ ನೋಡಿದರಲ್ಲಿ ಕಸ, ಗಂಟಿ, ಕಲ್ಲು ಮುಳ್ಳು ತುಂಬಿದ್ದು ಮಳೆಗಾಲದ ತೀವ್ರತೆಗೆ ಕಚೇರಿ ಆವರಣದ ಒಳಗೆ ಕಲುಷಿತ ನೀರು ಸಂಗ್ರಹವಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಈ ಸೊಳ್ಳೆಗಳ ಕಾಟಕ್ಕೆ ಹೆಸ್ಕಾಂ ಕಚೇರಿ ಹಿಂಬದಿಯ ಹೆಸ್ಕಾಂ ಸಿಬ್ಬಂದಿಗಳ ಕ್ವಾರ್ಟರ್ಸ್ ನಿವಾಸಿಗಳು ರೋಗದ ಭೀತಿಗೆ ತುತ್ತಾಗಿದ್ದಾರೆ.
ಹೆಸ್ಕಾಂ ಕಚೇರಿ ಆವರಣದಲ್ಲಿ ಕಾಗದ ಪತ್ರ, ಪ್ಲಾಸ್ಟಿಕ್ ಬಾಟಲಿ ಜೊತೆ ಅಡಿಕೆ ಎಲೆ ಗುಟ್ಕಾ ಉಗುಳಿದ್ದು ಕಚೇರಿ ಒಳಗೆ ಮುರಿದು ಹೋದ ಚೇರ್ ಇತರ ವಸ್ತುಗಳು ನಿರ್ವಹಣೆ ಇಲ್ಲದೆ ಉಳಿದಿವೆ ಇನ್ನು ಕಚೇರಿಗೆ ಆಗಮಿಸುವ ಜನರು ಮಾಸ್ಕ್ ಮರೆತಿದ್ದು ಅವರನ್ನು ಎಚ್ಚರಿಸುವವರೇ ಇಲ್ಲವಾಗಿದ್ದು ಸ್ವಚ್ಚತೆ ನಿರ್ವಹಣೆ ಬಗ್ಗೆ ಹೆಸ್ಕಾಂ ಅಧಿಕಾರಿಗಳನ್ನ ಕೇಳಿದ್ರೆ ಪಟ್ಟಣ ಪಂಚಾಯಿತಿ ಮಾಹಿತಿ ತಿಳಿಸಿದ್ರೂ ನಿರ್ವಹಣೆ ಮಾಡಿಲ್ಲ ಎಂದು ನೆಪ ಹೇಳುತ್ತಿದ್ದಾರೆ.
ಒಟ್ಟಾರೆ ಅನೈರ್ಮಲ್ಯದ ಗೂಡಾದ ಹೆಸ್ಕಾಂ ಕಚೇರಿ ಸುತ್ತಲೂ ಬೆಳೆದ ಹಸಿರು ಕಸ ರಾಡಿಯ ನಡುವೆ ಲೆಕ್ಕದ ಸಿಗದ ಪರಿಸ್ಥಿತಿ ತಲುಪಿದೆ.
Kshetra Samachara
23/10/2020 06:47 pm