ಧಾರವಾಡ: ಧಾರವಾಡದ ರಾಮನಗರ ಕೊನೆಯ ಬಸ್ ನಿಲ್ದಾಣದ ರಸ್ತೆ ಹದಗೆಟ್ಟು ಹೈದರಾಬಾದ್ ಕೂಡಿದೆ.
ಮಳೆಯಾದ್ರೆ ಸಾಕು ಕಂಬಳ ಓಡಿಸುವ ಕೆಸರಿನ ಗದ್ದೆಯಂತಾಗುತ್ತದೆ ಈ ರಸ್ತೆ. ನಮ್ಮ ರಾಜಕಾರಣಿಗಳೋ ಸ್ಮಾರ್ಟ ಸಿಟಿ ಅಂತಾ ಬ್ಯಾನರ್ ನಲ್ಲೇ ಹುಬ್ಬಳ್ಳಿ, ಧಾರವಾಡ ಅವಳಿನಗರಗಳನ್ನು ಸ್ಮಾರ್ಟ್ ಸಿಟಿ ಮಾಡಿಸಿದ್ದಾರೆ.
ಇದು ಕೇವಲ ರಾಮನಗರದ ಕಥೆ ಅಷ್ಟೇ ಅಲ್ಲ. ಇಡೀ ಹುಬ್ಬಳ್ಳಿ, ಧಾರವಾಡದ ರಸ್ತೆ ಮತ್ತು ಗ್ರಾಮೀಣ ಪ್ರದೇಶದ ರಸ್ತೆಗಳ ಕಥೆ ವ್ಯಥೆ. ಹಲವಾರು ವರ್ಷಗಳಿಂದ ಈ ರಾಮನಗರದ ಕೊನೆಯ ಬಸ್ ನಿಲ್ದಾಣದ ರಸ್ತೆ ಇದೇ ರೀತಿ ಇದೆಯಂತೆ. ಈ ರಸ್ತೆಗೆ ಒಂದಿಷ್ಟು ಡಾಂಬರು ಅಥವಾ ಕಾಂಕ್ರೀಟ್ ಹಾಕುವ ಕೆಲಸವನ್ನೂ ಮಾಡಿಲ್ಲ. ಈ ರಸ್ತೆ ಬಗ್ಗೆ ನಮ್ಮ ಪಬ್ಲಿಕ್ ನೆಕ್ಸ್ಟ್ ಓದುಗರೊಬ್ಬರು ವೀಡಿಯೋ ಮಾಡಿ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ತೋರಿಸಿ ಎಂದು ಮನವಿ ಮಾಡಿದ್ರು.
ಅಧಿಕಾರಿಗಳೇ ಹಾಗೂ ಜನಪ್ರತಿನಿಧಿಗಳೇ ಈ ರಸ್ತೆಗೆ ಒಂದು ಕಾಯಕಲ್ಪ ನೀಡಿ ಸಾರ್ವಜನಿಕರು ಸುಗಮವಾಗಿ ಸಂಚಾರ ಮಾಡುವಂತೆ ಇನ್ನಾದರೂ ಕ್ರಮ ಕೈಗೊಳ್ಳಿ.
Kshetra Samachara
11/10/2020 08:10 pm