ಧಾರವಾಡ: ಬಂಡಾಯದ ನೆಲವೆಂದೇ ಖ್ಯಾತಿ ಹೊಂದಿರುವ ನವಲಗುಂದಕ್ಕೆ ಈಗ ಮತ್ತೊಂದು ಗರಿ ಮೂಡಿದೆ. ಹೌದು...ನವಲಗುಂದದ ಮೇಘನಾ ಮನೋಜ ಜೈನ್ ಎಂಬ ಯುವತಿ ಭಾರತೀಯ ಲೋಕಸೇವಾ ಆಯೋಗ (ಐಎಎಸ್) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ತರಬೇತಿ ಪಡೆದು ಇದೀಗ ತ್ರಿಪುರಾ ರಾಜ್ಯದ ಅಥರ್ಗಾ ಎಂಬ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ನವಲಗುಂದ ವಿಧಾನಸಭಾ ಕ್ಷೇತ್ರದ ಶಲವಡಿ ಶೇಟಜಿ ಎಂದೇ ಹೆಸರಾದ ಪಾರಸಮಲ್ ಜೈನ್ ಅವರ ಮನೆತನದ ಕುಡಿ ಇದಾಗಿದ್ದು, ಇದೀಗ ಬಂಡಾಯ ನೆಲದಿಂದ ಐಎಎಸ್ ಪಾಸ್ ಮಾಡಿ ಜಿಲ್ಲಾಧಿಕಾರಿಯಾಗಿಯೂ ಅಧಿಕಾರ ಸ್ವೀಕಾರ ಮಾಡುವ ಮೂಲಕ ಕೇವಲ ನವಲಗುಂದ ಮಾತ್ರವಲ್ಲದೇ ಇಡೀ ಧಾರವಾಡ ಜಿಲ್ಲೆಯ ಹಿರಿಮೆ ಹೆಚ್ಚಿಸಿದ್ದಾರೆ.
Kshetra Samachara
07/09/2022 01:38 pm