ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಅಬಕಾರಿ ಇಲಾಖೆಯಿಂದ ಜಾಗೃತಿ ಅಭಿಯಾನ

ನವಲಗುಂದ : ಅಬಕಾರಿ ಇಲಾಖೆ, ಅಬಕಾರಿ ನಿರೀಕ್ಷಿಕರ ಕಚೇರಿ ನವಲಗುಂದ ವಲಯದ ವತಿಯಿಂದ ನವಲಗುಂದ ತಾಲ್ಲೂಕಿನ ಶಿರೂರ ಗ್ರಾಮದ ಶ್ರೀ ನೀಲಪ್ಪಗೌಡ ಗೌಡಪ್ಪಗೌಡ ಬಾಳನಗೌಡ್ರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಳ್ಳಬಟ್ಟಿ ಸಾರಾಯಿಯ ಬಗ್ಗೆ 2022ರ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

ಕಳ್ಳಬಟ್ಟಿ ಸಾರಾಯಿ ಸೇವನೆ ಮತ್ತು ನಿದ್ರಾಜನಕ ಔಷಧಿಗಳ ಹಾಗೂ ಮನೋದ್ರೇಕಕಾರಿ ವಸ್ತುಗಳು ದುಷ್ಪರಿಣಾಮಗಳಿಂದ ಆಗಬಹುದಾದ ಅನಾಹುತಗಳ ಬಗ್ಗೆ ಪ್ರೌಢ ಶಾಲಾ ಮಕ್ಕಳಿಗೆ ಅಬಕಾರಿ ಅಧಿಕಾರಿಯಾದ ಗೀತಾ ತಗ್ಗಿಹಾಳ ಅವರ ನೇತೃತ್ವದಲ್ಲಿ ತಿಳುವಳಿಕೆ ಮೂಡಿಸುವ ಕೆಲಸವನ್ನು ಮಾಡಲಾಯಿತು.

ಮೇ ತಿಂಗಳ 30 ರಿಂದ ಜೂನ್ ತಿಂಗಳ 21 ರ ವರೆಗೆ ಪ್ರೌಢ ಶಾಲಾ ಮಕ್ಕಳಿಗೆ ಜಾಗೃತಿ ಅಭಿಯಾನವನ್ನು ಅಬಕಾರಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

Edited By : PublicNext Desk
Kshetra Samachara

Kshetra Samachara

11/06/2022 10:15 pm

Cinque Terre

19.59 K

Cinque Terre

0

ಸಂಬಂಧಿತ ಸುದ್ದಿ