ಧಾರವಾಡ: 3ನೇ ಹಂತದ ಕೋವ್ಯಾಕ್ಸಿನ್ ಲಸಿಕೆ ಅಭಿಯಾನಕ್ಕೆ ಚಾಲನೆ ಸಿಕ್ಕಿದ್ದು, ಧಾರವಾಡದಲ್ಲಿ ಇನ್ನೂ ಲಸಿಕೆ ವಿತರಣೆ ಆರಂಭಗೊಂಡಿಲ್ಲ. ಲಸಿಕೆ ಪಡೆಯುವುದಕ್ಕಾಗಿ ಹಿರಿಯ ನಾಗರಿಕರು ಕಾಯುತ್ತ ಕುಳಿತ ಪ್ರಸಂಗ ನಡೆದಿದೆ.
ಧಾರವಾಡ ಜಿಲ್ಲಾ ಆಸ್ಪತ್ರೆಯ ಕೇಂದ್ರದಲ್ಲಿ ಮೂರನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಣೆ ನಡೆಯುತ್ತಿದೆ. ಮಧ್ಯಾಹ್ನ 12ಕ್ಕೆ ಆರಂಭಗೊಳ್ಳಬೇಕಿದ್ದ ವಿತರಣೆ ಮಧ್ಯಾಹ್ನವಾದರೂ ಆರಂಭಗೊಂಡಿರಲಿಲ್ಲ.
ಲಸಿಕೆ ಪಡೆಯುವುದಕ್ಕೆ ಹಿರಿಯ ನಾಗರಿಕರು ಕಾಯುತ್ತ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಲಸಿಕೆ ಆರಂಭಗೊಳ್ಳದ ಹಿನ್ನೆಲೆ ಹಿರಿಯ ನಾಗರಿಕರ ಆಕ್ರೋಶ ಕೂಡ ವ್ಯಕ್ತಪಡಿಸಿದರು.
Kshetra Samachara
01/03/2021 04:59 pm