ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡಕ್ಕೆ ಬಂದ ಕೊರೊನಾ ಲಸಿಕೆ

ಧಾರವಾಡ: ಜಗತ್ತನ್ನೇ ತಲ್ಲಣಗೊಳಿಸಿದ್ದ ಕೊರೊನಾಕ್ಕೆ ದಿವ್ಯ ಔಷಧಿ ಸಿದ್ಧಗೊಂಡಿದ್ದು, ಆ ಔಷಧಿ ಇದೀಗ ಧಾರವಾಡಕ್ಕೂ ಬಂದು ತಲುಪಿದೆ.

ಧಾರವಾಡದ ಡಿಎಚ್‌ಒ ಕಚೇರಿಯಲ್ಲಿರುವ ಕೋಲ್ಡ್ ಸ್ಟೋರೇಜ್ ನಲ್ಲಿ ಕೊರೊನಾ ವ್ಯಾಕ್ಸಿನ್ ನ್ನು ಶೇಖರಣೆ ಮಾಡಲು ತರಲಾಗಿದೆ. ಜ.16 ರಂದು ಧಾರವಾಡದ 6 ಕೇಂದ್ರಗಳ ಮೂಲಕ ಈ ವ್ಯಾಕ್ಸಿನ್ ನೀಡಲಾಗುತ್ತದೆ.

ಇಡೀ ಜಗತ್ತಿನಾದ್ಯಂತ ತನ್ನ ಪಾರುಪತ್ಯ ಮೆರೆದ ಕೊರೊನಾ ಕೊನೆಗಾಣುವ ಹಂತಕ್ಕೆ ಬಂದಿದ್ದು, ಭಾರತದ ಮಣ್ಣಿನಲ್ಲೇ ಈ ಸೋಂಕಿಗೆ ಔಷಧಿ ಸಿದ್ಧಗೊಂಡಿದೆ. ಧಾರವಾಡಕ್ಕೆ ಗೂಡ್ಸ್ ವಾಹನದ ಮೂಲಕ ಬಂದ ಕೊರೊನಾ ವ್ಯಾಕ್ಸಿನನ್ನು ಪೊಲೀಸ್ ಎಸ್ಕಾರ್ಟ್ ಕೊಟ್ಟು ಬರ ಮಾಡಿಕೊಳ್ಳಲಾಯಿತು.

ಜೊತೆಗೆ ಜಾನಪದ ಕಲಾವಿದರು ತಮ್ಮ ಹಾಡುಗಾರಿಕೆ ಮುಖಾಂತರ ಸಂಜೀವಿನಿಯನ್ನು ಖುಷಿಯಿಂದ ಧಾರವಾಡ ಜಿಲ್ಲೆಗೆ ಬರ ಮಾಡಿಕೊಂಡರು.

ಸದ್ಯ ಕೊರೊನಾಕ್ಕೆ ಸಂಜೀವಿನಿಯಾದ ಕೋವ್ಯಾಕ್ಸಿನ್ ಧಾರವಾಡ ತಲುಪಿದ್ದು, ಜ.16 ರಿಂದ ಲಸಿಕಾ ವಿತರಣೆ ಆರಂಭವಾಗಲಿದೆ. ಆ ಮೂಲಕ ಕೊರೊನಾ ಯುಗಾಂತ್ಯ ಕಾಣಲಿದೆ.

Edited By : Manjunath H D
Kshetra Samachara

Kshetra Samachara

13/01/2021 09:01 pm

Cinque Terre

70.92 K

Cinque Terre

10

ಸಂಬಂಧಿತ ಸುದ್ದಿ