ಧಾರವಾಡ: ಇದೀಗ ರೂಪಾಂತರ ಕೊರೊನಾ ವೈರಸ್ ಹಾವಳಿ ಜೋರಾಗುತ್ತಿದ್ದು, ಇದನ್ನು ಬ್ರಿಟನ್ ವೈರಸ್ ಎಂದೇ ಕರೆಯಲಾಗುತ್ತಿದೆ. ಧಾರವಾಡ ಜಿಲ್ಲೆಗೆ ಬ್ರಿಟನ್ ಹಾಗೂ ಯುಕೆ ಯಿಂದ 37 ಜನ ಬಂದಿದ್ದು,
ಅದರಲ್ಲಿ 36 ಜನರ ವರದಿ ನೆಗೆಟಿವ್ ಎಂದು ಬಂದಿದೆ. ಒಬ್ಬರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ಅಥವಾ ನಾಳೆ ಬ್ರಿಟನ್ ನಿಂದ ಬಂದ ಆ ವ್ಯಕ್ತಿ ಸಿಗುತ್ತಾರೆ. ನಂತರ ಅವರನ್ನೂ ತಪಾಸಣೆಗೊಳಪಡಿಸಲಾಗುವುದು ಎಂದರು.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಜಿಲ್ಲಾಡಳಿತ ಕೆಲವೊಂದಿಷ್ಟು ನಿಯಮಾವಳಿಗಳನ್ನು ಮಾಡಿದ್ದು, ನಿಯಮ ಮೀರಿದವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.
ಅಬಕಾರಿ ಹಾಗೂ ಪೊಲೀಸ್ ಸ್ಕ್ವ್ಯಾಡ್ ಗಳನ್ನು ಮಾಡಲಾಗಿದ್ದು, ಹೊಸ ವರ್ಷಾಚರಣೆ ಸಂದರ್ಭದಲ್ಲಿ ದಾಬಾ ಹಾಗೂ ದೊಡ್ಡ ದೊಡ್ಡ ಹೋಟೆಲ್ ಗಳನ್ನು ತಪಾಸಣೆಗೊಳಪಡಿಸಲಾಗುವುದು.
ಕೊರೊನಾ ರೂಪಾಂತರ ವೈರಸ್ ಬಂದಿದ್ದು, ಎಲ್ಲರೂ ತಮ್ಮ ಸುರಕ್ಷತೆಯಲ್ಲಿದ್ದುಕೊಂಡು ತಮ್ಮ ತಮ್ಮ ಮನೆಗಳಲ್ಲಿಯೇ ಹೊಸ ವರ್ಷಾಚರಣೆ ಮಾಡಬೇಕು ಎಂದರು.
Kshetra Samachara
29/12/2020 03:10 pm