ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜನತಾ ಜಲಧಾರೆ ಯಾತ್ರೆಯಲ್ಲಿ ಪಾಲ್ಗೊಳ್ಳಲು ಹಜರತ್'ಅಲಿ ಜೋಡಮನಿ ಮನವಿ

ಜಾತ್ಯಾತೀತ ಜನತಾದಳದ ಮಹತ್ವಾಕಾಂಕ್ಷಿ ಜನತಾ ಜಲಧಾರೆ ಜಲಯಾತ್ರೆ ಇದೇ ಏಪ್ರೀಲ್ 29 ಮತ್ತು 30 ರಂದು ಕುಂದಗೋಳ ತಾಲೂಕಿನ ಕಳಸ ಗ್ರಾಮದಿಂದ ಜೆಡಿಎಸ್ ಅಭ್ಯರ್ಥಿ ಹಜರತ್'ಅಲಿ ಜೋಡಮನಿ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಆರಂಭವಾಗಲಿದೆ.

ಈ ಜನತಾ ಜಲಧಾರೆ ರಥಯಾತ್ರೆ ಕುಂದಗೋಳ ಮತಕ್ಷೇತ್ರದ ಬೆಣ್ಣೆಹಳ್ಳದ ಅಭಿವೃದ್ಧಿ ಕೃಷಿ ಹಾಗೂ ಕೆರೆಗಳಿಗೆ ನೀರು ತುಂಬಿಸುವ ದಿಟ್ಟ ನಿರ್ಧಾರದೊಂದಿಗೆ 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ಜನಾಶೀರ್ವಾದ ಕೇಳಲಿದೆ

ಕುಂದಗೋಳ ಮತಕ್ಷೇತ್ರದ 24 ಹಳ್ಳಿಗಳ ಮೇಲೆ ಈ ಜನತಾ ಜಲಧಾರೆ ಜಲಯಾತ್ರೆ ಸಂಚರಿಸಲಿದೆ

ಸಮಸ್ತ ಕುಂದಗೋಳ ಮತಕ್ಷೇತ್ರದ ಹಳ್ಳಿಯ ಜನತೆ ಈ ಜನತಾ ಜಲಧಾರೆ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಜೆಡಿಎಸ್ ಅಭ್ಯರ್ಥಿ ಹಜರತ್'ಅಲಿ ಜೋಡಮನಿ ತಮ್ಮಲ್ಲಿ ಮನವಿ ಮಾಡಿದ್ದಾರೆ

ಬನ್ನಿ ಬನ್ನಿ ರೈತಾಪಿ ಜನರೇ ನಿಮ್ಮ ಅಭ್ಯುದಯದ ಯಾತ್ರೆಗೆ ಕೈ ಜೋಡಿಸಿ

ರೈತಾಪಿ ಮಹಿಳೆಯರೇ, ಮಕ್ಕಳೇ, ಯುವಕರೇ ಬನ್ನಿ, ಬನ್ನಿ, ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಭಾಗಿಯಾಗಿರಿ

Edited By : Manjunath H D
Kshetra Samachara

Kshetra Samachara

27/04/2022 09:15 pm

Cinque Terre

52.37 K

Cinque Terre

5