ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಡಿನ ಸಮಸ್ತ ಜನತೆಗೆ, ರೈತ ಬಾಂಧವರಿಗೆ ಪ್ರಸಾದ ಶೆಟ್ಟಿ ಹಾಗೂ ಪ್ರಶಾಂತ ಶೆಟ್ಟಿ ಅವರಿಂದ ದೀಪಗಳ ಹಬ್ಬ ದೀಪಾವಳಿ ಶುಭಾಶಯಗಳು

ದೀಪದ ಬೆಳಕು ಎಲ್ಲರ ಬದುಕಿನಲ್ಲಿ ಪ್ರಕಾಶಮಾನವಾಗಿ ಪ್ರಜ್ವಲಿಸಲಿ

ಎಲ್ಲರ ಬಾಳಿನ ಕತ್ತಲೆ ಕಳೆದು ಜೀವನದಲ್ಲಿ ಹೊಸ ಬೆಳಕು ಹೊಮ್ಮಲಿ

ಕೊರೊನಾ ತೊಲಗಲಿ ಎಲ್ಲರ ಜೀವನ ಆರೋಗ್ಯಯುತವಾಗಿ ಮುನ್ನೆಡೆಯಲಿ

ದೀಪಗಳ ಹಬ್ಬ ದೀಪಾವಳಿ ನಿಮ್ಮೆಲ್ಲರ ಬದುಕಿನಲ್ಲಿ ಬೆಳಕಾಗಲಿ

ಸಮಸ್ತ ನಾಡಿನ ಜನತೆಗೆ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರದ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ನನ್ನ ಎಲ್ಲ ಆತ್ಮೀಯ ಜನತೆಯ ಬಾಳಿನಲ್ಲಿ ಹೊರ ಹೊಮ್ಮಲಿ ಸಂತೋಷದ ಹೊನಲು. ಕಷ್ಟಗಳೆಲ್ಲ ಕಳೆದು ಸಂತೋಷದ ಹೊಳೆ ಹರಿಯಲಿ. ಅಜ್ಞಾನ ಹಾಗೂ ಅಂಧಕಾರದ ಬದುಕಿನಿಂದ ನಿಮ್ಮೆಲ್ಲರಿಗೂ ಮುಕ್ತಿ ದೊರೆಯಲಿ. ದೀಪಾವಳಿ ಹಬ್ಬದ ನಿಮ್ಮ ಜೀವನದಲ್ಲಿ ಹೊಸ ಸಂಚಲನ ಸೃಷ್ಟಿಸಲಿ. ಮನುಕುಲಕ್ಕೆ ಮಾರಕವಾದ ಕೊರೊನಾದಂತಹ ಮಹಾಮಾರಿ ತೊಲಗಿ ಎಲ್ಲರ ಆರೋಗ್ಯ ಹಾಗೂ ಐಶ್ವರ್ಯ ವೃದ್ಧಿಸಲಿ. ಎಲ್ಲರ ಬದುಕು ಹಸನಾಗಿರಲಿ. ದೇಶಕ್ಕೆ ಅನ್ನ ನೀಡುವ ಅನ್ನದಾತನ ಬದುಕು ಸದಾ ಸಂತೋಷದಿಂದ‌ ಮುನ್ನಡೆಯಲಿ.

ನಿಮ್ಮೆಲ್ಲರ ಕಾರ್ಯಗಳಿಗೆ ದೇವರ ಅನುಗ್ರಹದಿಂದ ಯಶಸ್ವಿಯಾಗಿ ನೆರವೇರಲಿ. ಬದುಕಿನಲ್ಲಿ ಅಂಧಕಾರದ ಕತ್ತಲೆಯ ಕಳೆದು ದೀಪದ ಸಾಕ್ಷಾತ್ಕಾರದ ಬೆಳಕಿನಿಂದ ನಿಮ್ಮೆಲ್ಲರ ಬದುಕು ಉಜ್ವಲವಾಗಿ ಬೆಳಗಲಿ. ಇಷ್ಟು ದಿನ ಅನುಭವಿಸಿದ ಕಷ್ಟಗಳು ಕಣ್ಮರೆಯಾಗಲಿ.

ಮಹಾಲಕ್ಷ್ಮಿ ನಾಡಿನ ನಮ್ಮ ಎಲ್ಲ ಆತ್ಮೀಯ ಜನತೆಗೆ ಉತ್ತಮ ಆರೋಗ್ಯವನ್ನು ಕರುಣಿಸಲಿ. ಎಲ್ಲರ ಬದುಕು ಹಸಿರಾಗಿರಲಿ. ಎಲ್ಲರಿಗೂ ಮತ್ತೊಮ್ಮೆ ದೀಪಗಳ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.

ಶುಭಾಶಯಗಳು ಕೋರುವವರು: ಪ್ರಸಾದ ಶೆಟ್ಟಿ ಹಾಗೂ ಪ್ರಶಾಂತ ಶೆಟ್ಟಿ, ಉದ್ಯಮಿಗಳು ಹಾಗೂ ಸಮಾಜ ಸೇವಕರು ಹುಬ್ಬಳ್ಳಿ

ಬೈಟ್: ಪ್ರಸಾದ ಶೆಟ್ಟಿ (ಉದ್ಯಮಿಗಳು ಹುಬ್ಬಳ್ಳಿ)

Edited By : Vijay Kumar
Kshetra Samachara

Kshetra Samachara

04/11/2021 10:12 am

Cinque Terre

11.81 K

Cinque Terre

0