ಕುಂದಗೋಳ: ಅಬ್ಬಾ ! ಭವ್ಯ ಭಾರತಕ್ಕೆ ಸ್ವಾತಂತ್ರ ಲಭಿಸಿ ದಿನ ದಿನ ಕಳೆಯುತ್ತಾ ಇಂದಿಗೆ ಎಷ್ಟು ವರ್ಷ ಕಳೆದಿದೆ ಅಂದ್ರೆ ಈ ಮಕ್ಕಳು ಜನಸಾಮಾನ್ಯರು ಹೇಳ್ತಾರೆ ನೋಡಿ.
ಈಗಾಗಲೇ ಇದೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಶಾಲೆ ಕಾಲೇಜುಗಳಲ್ಲಿ ಮಕ್ಕಳು ಸಹ ತಯಾರಾಗಿ 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವೇಷಭೂಷಣ, ಭಾಷಣ ಸೇರಿ ವಿವಿಧ ಸ್ಪರ್ಧೆ ತಯಾರಿ ಆರಂಭಿಸಿದ್ದಾರೆ. ಆದ್ರೆ ಇಲ್ಲೊಂದು ತಾಲೂಕಿನ ದಂಡಾಧಿಕಾರಿ ಮಾತ್ರ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಮುಗಿಯುವ ಮೊದಲೇ 76ನೇ ಸ್ವಾತಂತ್ರ್ಯ ದಿನಾಚರಣೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಇದೇನಪ್ಪಾ ? ಆಶ್ಚರ್ಯ ಅಂತೀರಾ? ಅದರ ಬಗ್ಗೆ ಅವರೇ ಹೇಳ್ತಾರೆ ಕೇಳಿ.
ಕೇಳಿದ್ರಲ್ಲಾ ಮಾನ್ಯ ಕುಂದಗೋಳ ತಾಲೂಕಿನ ದಂಡಾಧಿಕಾರಿಗಳನ್ನು ಆಜಾದಿ ಕಾ ಅಮೃತ ಮಹೋತ್ಸವ 75ನೇ ಸ್ವಾತಂತ್ರ್ಯ ದಿನಾಚರಣೆ ಸಿದ್ಧತೆ ಬಗ್ಗೆ ಕೇಳಿದ್ರೆ ಅವರು ಅದಾಗಲೇ 76ನೇ ಸ್ವಾತಂತ್ರ್ಯ ದಿನಾಚರಣೆ ಸಿದ್ಧತೆ ಹೇಳ್ತಾ ಇದ್ದಾರೆ. ಏನ್ ಹೇಳಬೇಕು ಇವರಿಗೆ?
Kshetra Samachara
08/08/2022 08:36 am