ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಮಧ್ಯಾಹ್ನ 12ರ ಬಳಿಕವೇ ಕಚೇರಿಗೆ ಹಾಜರಾಗುವ ಗ್ರಾಪಂ ಅಧಿಕಾರಿಗಳು!

ಕುಂದಗೋಳ: ಹಳ್ಳಿಗರ ಸಮಸ್ಯೆ ಆಲಿಸಿ ಪರಿಹಾರ ನೀಡಬೇಕಾದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಮಧ್ಯಾಹ್ನ 12 ಆದರೂ ಪಂಚಾಯಿತಿ ಕಡೆ ತಲೆ ಹಾಕದೇ ಇರುವುದು ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮ ಪಂಚಾಯಿತಿಯಲ್ಲಿ ಕಾಣ ಸಿಗುತ್ತದೆ!

ಗಡೇನಕಟ್ಟಿ ಗ್ರಾಮ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಗಳು ಸರ್ಕಾರಿ ಸಮಯ ಪಾಲನೆ ನಿಯಮ ಉಲ್ಲಂಘಿಸಿ 12 ಗಂಟೆ ಮೇಲೆಯೇ ಕಚೇರಿಗೆ ಕರ್ತವ್ಯಕ್ಕಾಗಿ ಹಾಜರಾಗುವ ದೃಶ್ಯಾವಳಿ ಪಬ್ಲಿಕ್ ನೆಕ್ಸ್ಟ್ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿವೆ.

ಈ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ, ಕ್ಷುಲ್ಲಕ ಕಾರಣ ನೀಡ್ತಾ ಇದ್ದಾರೆ. ಇವರು ನೀಡುವ ಕಾರಣಕ್ಕೆ ಸರಿಯಾದ ಪುರಾವೆ ಇಲ್ಲಾ! ಇನ್ನು, ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಕಾಮಗಾರಿ ಅಡಿಟ್ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಹಾಯಾಗಿ ಈ ರೀತಿ ಬೈಕ್ ಇಳಿದು 12 ಗಂಟೆ ಮೇಲೆಯೇ ಪಂಚಾಯಿತಿ ಸೇರುತ್ತಿದ್ದಾರೆ.

ಒಟ್ಟಾರೆ ಮೊದಲೇ ಮೂಲ ಸೌಕರ್ಯಗಳ ಸಮಸ್ಯೆ ಸುಳಿಯಲ್ಲಿ ಬಳಲುತ್ತಿರುವ ಗುಡೇನಕಟ್ಟಿ, ಅಲ್ಲಾಪೂರ, ಕಡಪಟ್ಟಿ, ಯರಿನಾರಾಯಣಪೂರ ಗ್ರಾಮಗಳನ್ನು ಅಭಿವೃದ್ಧಿ ಮಾಡಬೇಕಾದ ಈ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಮೇಲಾಧಿಕಾರಿಗಳು ಗಮನ ಹರಿಸಬೇಕಿದೆ.

Edited By : Shivu K
Kshetra Samachara

Kshetra Samachara

29/07/2022 04:58 pm

Cinque Terre

17.99 K

Cinque Terre

0

ಸಂಬಂಧಿತ ಸುದ್ದಿ