ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕಾನೂನು ಸೇವಾ ಸಮಿತಿ ಜೆ.ಎ‌ಸ್.ಎಸ್ ಶಾಲೆಯಲ್ಲಿ ಪರಿಸರ ದಿನ

ಕುಂದಗೋಳ : ತಾಲೂಕು ಕಾನೂನು ಸೇವಾ ಸಮಿತಿ ಹಾಗು ಜೆ.ಎಸ್.ಎಸ್ ವಿದ್ಯಾಪೀಠ ಕುಂದಗೋಳ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಇಂದು ಆಚರಿಸಲಾಯಿತು.

ಗೌರವಾನ್ವಿತ ಪಿ.ಜೆ.ಪರಮೇಶ್ವರ ಹಿರಿಯ ದಿವಾಣಿ ನ್ಯಾಯಾಧೀಶರು ತೆಂಗಿನ ಸಸಿಯನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆ ಚಾಲನೆ ನೀಡಿದರು, ಮುಖ್ಯ ಅಥಿತಿಗಳಾಗಿ ಚಂದ್ರಕಲಾ ಪ್ರಭಾಕರ ಸಹಾಯಕ ಸರಕಾರಿ ಅಭಿಯೋಜಕರು, ರಜಾಕಸಾಬ ನದಾಫ್ ವಲಯ ಅರಣ್ಯಾಧಿಕಾರಿಗಳು ಎನ್.ಎಸ್.ಬಡ್ನಿ ವಕೀಲರು, ವಾಯ್.ಎಸ್ ಮೇಗೂಂಡಿ, ಎಲ್.ಡಿ.ದೊಡ್ಡಮನಿ ಆಗಮಿಸಿದ್ದರು.

ಜೆ.ಎಸ್.ಎಸ್ ವಿದ್ಯಾಪೀಠದ ಮುಖ್ಯ ಶಿಕ್ಷಕ ಎಮ್ ಸಿ ಶಿಗ್ಲಿ ಅಧ್ಯಕ್ಷತೆ ವಹಿಸಿದ್ದರು, ಹಿರಿಯ ವಕೀಲ ಜಿ.ಬಿ.ಸೊರಟೂರ ಪರಿಸರ ರಕ್ಷಣೆಯ ಪ್ರತಿಜ್ಞಾ ವಿಧಿ ಬೋಧಿಸಿದರು. ಬಳಿಕ ಪಿ.ಜೆ ಪರಮೇಶ್ವರ ಹಿರಿಯ ನ್ಯಾಯಾಧೀಶರು ಮಾತನಾಡಿ ಪರಿಸರ ಉಳಿಸಿ ಬೆಳೆಸಲು ಕರೆ ನೀಡಿದರು, ಎಸ್.ವಿ.ಕುನ್ನೂರ ಉಪನ್ಯಾಸಕರು ಕಾರ್ಯಕ್ರಮ ನಿರೂಪಣೆ ಮಾಡಿದರು ಆರ್.ವಿ.ನರಗುಂದ ಸ್ವಾಗತಿಸಿ ವಂದಿಸಿದರು.

Edited By : PublicNext Desk
Kshetra Samachara

Kshetra Samachara

07/06/2022 11:55 am

Cinque Terre

4.05 K

Cinque Terre

0

ಸಂಬಂಧಿತ ಸುದ್ದಿ