ಕುಂದಗೋಳ : ತಾಲೂಕಿನ ಹಿರೇನೆರ್ತಿ ಗ್ರಾಮದಲ್ಲಿ ಬಾವುಸಾಹೇಬ ಮಹಾರಾಜರ ಪಲ್ಲಕ್ಕಿ ಉತ್ಸವ ಅತಿ ವಿಜೃಂಭಣೆಯಿಂದ ಕುಂಭ ಕೊಡಗಳ ಮೆರವಣಿಯಲ್ಲಿ ನಡೆಯಿತು.
ಈ ಕಾರ್ಯಕ್ರಮವೂ ಬಂಡಿವಾಡದ ಶ್ರೀ ಸದ್ಗುರು ಸಮರ್ಥ ಡಾ.ಎ.ಸಿ.ವಾಲಿ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ನಡೆದು ಮೆರವಣಿಗೆಯಲ್ಲಿ ಕರ್ನಾಟಕ ರತ್ನ, ಪವರಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳಿಂದ ಆನೆಯ ಮೇಲೆ ಪುನೀತ್ ರಾಜಕುಮಾರ್ ಭಾವಚಿತ್ರ ಮೆರವಣಿಯುದ್ಧಕ್ಕೂ ಕಂಡು ಬಂದಿತು, ಜೊತೆ ಜೊತೆಗೆ ಡಾ.ಎ.ಸಿ.ವಾಲಿ ಗುರುಗಳು ಮೆರವಣಿಗೆಯೂ ನಡೆಯಿತು.
ಈ ಮೆರವಣಿಗೆಯೂ ಹಿರೇನೆರ್ತಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಗ್ರಾಮದ ಜನರಿಂದ ಪೂಜೆ ಸಲ್ಲಲ್ಪಟ್ಟಿತು.
ಬಾವುಸಾಹೇಬರ ಮೆರವಣಿಗೆಯಲ್ಲಿ ಕುಂಭ ಕೊಡಗಳನ್ನು ಹೊತ್ತ ಹೆಂಗಳೇಯರು ಸಾಲು ಹಿರೇನೆರ್ತಿ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿ ಮಾಡಿತು.
Kshetra Samachara
22/03/2022 02:57 pm