ಕುಂದಗೋಳ : ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಗೂಡೌನ್'ನಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಹಿಂಗಾರು ಬೆಳೆ, ಕಡಲೆ ಖರೀದಿಗಾಗಿ ಈಗಾಗಲೇ ಅರ್ಜಿ ಪಡೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಪ್ರಸಕ್ತ ವರ್ಷ ಇಂದಿನವರೆಗೆ 238 ಅರ್ಜಿಗಳು ಸಲ್ಲಿಕೆಯಾಗಿವೆ.
ಹಿಂಗಾರು ಕಡಲೆ ಬೆಳೆಯನ್ನು ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಲು ಇಚ್ಚಿಸುವ ರೈತರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಆಧಾರ್ ಕಾರ್ಡ್, ಎಫ್.ಐ.ಡಿ ಸಂಖ್ಯೆ, ಜಮೀನಿನ ಉತಾರ, ಬ್ಯಾಂಕ್ ಪಾಸ್ ಬುಕ್, ಚಾಲ್ತಿ ಮೊಬೈಲ್ ಸಂಖ್ಯೆ ನೀಡುವಂತೆ ತಿಳಿಸಲಾಗಿದೆ. ಒಂದು ಎಕರೆಗೆ ನಾಲ್ಕು ಕ್ವಿಂಟಾಲ್ ಗರಿಷ್ಠ ಒಂದು ಖಾತೆಯಿಂದ 15 ಕ್ವಿಂಟಾಲ್ ಹೆಸರು ಖರೀದಿಗೆ ಸರ್ಕಾರ ಅವಕಾಶವಿದ್ದು ಬೆಲೆ ಕ್ವಿಂಟಾಲ್'ಗೆ 5230 ರೂಪಾಯಿ ನಿಗದಿ ಪಡಿಸಲಾಗಿದೆ.
ಕುಂದಗೋಳ ಸಂಶಿ ಹೋಬಳಿ ಹಾಗೂ ಸುತ್ತ ಮುತ್ತಲಿನ ಹಳ್ಳಿಯ ರೈತರು ಈ ಯೋಜನೆ ಪ್ರಯೋಜನ ಪಡೆಯಬೇಕಿದೆ.
Kshetra Samachara
23/02/2022 04:57 pm