ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಅನ್ನ ಹಾಕಿದವನ ಋಣ ಮರೆತ ತಹಶೀಲ್ದಾರ ಕಚೇರಿ, ಅಧಿಕಾರಿಗಳು !

ಕುಂದಗೋಳ : ಒಂದಲ್ಲ ಎರಡಲ್ಲಾ ಮೂರು ಸಾವಿರದ ಮುನ್ನೂರು ಜನಕ್ಕೆ ಅಡುಗೆ ಮಾಡಿ ಅನ್ನ ಬಡಿಸಿದ ಅಡುಗೆ ಭಟ್ಟನೊಬ್ಬ ಅನ್ನದ ಋಣ ತೀರಿಸುವಂತೆ ಕಳೆದ ಮೂರು ವರ್ಷದಿಂದ ಕುಂದಗೋಳ ತಹಶೀಲ್ದಾರ ಕಚೇರಿಗೆ ಚಪ್ಪಲಿ ಸವೆಸಿ ರೋಸಿ ಹೋಗಿ ಕೈ ಮುಗಿತೇನಿ ಹಣ ಕೊಡಿ ಎನ್ನುತ್ತಿದ್ದಾನೆ.

ಕಳೆದ 2019 ರ ಉಪಚುನಾವಣೆಯಲ್ಲಿ 2000 ಜನರಿಗೆ ಹಾಗೂ 2021 ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 500 ಜನರಿಗೆ, 2020-21ರ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶದ ದಿನ ಹರಭಟ್ಟ ಶಾಲಾ ಆವರಣದಲ್ಲಿ 800 ಜನ ಚುನಾವಣಾ ಸಿಬ್ಬಂದಿಗಳು, ಅಧಿಕಾರಿಗಳಿಗೆ ಚಹಾ, ಟಿಫಿನ್, ಊಟ ಪೂರೈಸಿದ ವಿಜಯ ಪೂಜಾರ ಎಂಬ ಭಟ್ಟನ ವ್ಯಥೆ ಇದು.

ಅಧಿಕಾರಿಗಳ ಮಾತಿನಂತೆ ಮೂರು ಚುನಾವಣೆ ಸಂದರ್ಭ ತನ್ನದೇ ಸ್ವಂತ ಹಣದಲ್ಲಿ ದಿನಸಿ ಸಾಮಗ್ರಿ ಪಾತ್ರೆ ಜೊತೆ ಅಡುಗೆ ಸಹಾಯಕರನ್ನು ಕರೆದುಕೊಂಡು ಮೂರು ಚುನಾವಣೆಗೆ ಅನ್ನ ಬಡಿಸಿದ ಭಟ್ಟ ವಿಜಯಗೆ ತಹಶೀಲ್ದಾರ ಇಲಾಖೆ ಅಧಿಕಾರಿಗಳು ಮೂರು ವರ್ಷ ಕಳೆದರೂ ಸಂಪೂರ್ಣ ಹಣ ಭರಿಸಿಲ್ಲಾ. ಒಮ್ಮೆ 60 ಸಾವಿರ ಹಣ ನೀಡಿ ಬಾಕಿ 2 ಲಕ್ಷ 50 ಸಾವಿರ ರೂಪಾಯಿ ಹಣವನ್ನು ಮೂರು ವರ್ಷ ಕಳೆದ್ರೂ ನೀಡದೆ ಸುಮ್ಮನಿದ್ದಾರೆ.

ಇನ್ನೂ ಅಡುಗೆ ಭಟ್ಟ ವಿಜಯ ಪೂಜಾರ ಜೊತೆ ಕೆಟರಿಂಗ್ ಸಹಾಯಕರಾಗಿ ದುಡಿದ ಆಳು ಸಹ ಆರ್ಥಿಕ ಕಷ್ಟಕ್ಕೆ ಸಿಲುಕಿ ನಿತ್ಯ ವಿಜಯ ಪೂಜಾರಿ ಬಳಿ ತಾವು ದುಡಿದ ಕೂಲಿ ಕೇಳುತ್ತಿದ್ದಾರೆ.

ಈ ಬಗ್ಗೆ ಕುಂದಗೋಳ ತಹಶೀಲ್ದಾರ ಇಲಾಖೆ ಅಧಿಕಾರಿಗಳನ್ನು ಕೇಳಿದ್ರೇ ಕೊರೊನಾ ನೆಪ ಹೇಳಿ ಸಮಯ ಕಳೆದೂ ಅನ್ನ ಹಾಕಿದವನ ಮರೆತಿದ್ದಾರೆ, ಈ ಪ್ರಕರಣಕ್ಕೆ ಜಿಲ್ಲಾಧಿಕಾರಿಗಳೇ ನ್ಯಾಯ ನೀಡಬೇಕಿದೆ.

-ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ

Edited By : Shivu K
Kshetra Samachara

Kshetra Samachara

09/02/2022 07:18 pm

Cinque Terre

48.85 K

Cinque Terre

2

ಸಂಬಂಧಿತ ಸುದ್ದಿ