ಹುಬ್ಬಳ್ಳಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿರುವ ವಾರ್ಷಿಕ ಆಯವ್ಯಯ ಬಜೆಟ್-2022 ಸ್ವಾಗತಾರ್ಹವಾಗಿದ್ದು, ಇದು ದೇಶದ ಸರ್ವಾಂಗೀಣ ಅಭಿವೃದ್ಧಿ ಜೊತೆಗೆ ಉದ್ಯೋಗ ಸೃಷ್ಟಿಗೆ ಪೂರಕವಾಗಿದೆ ಎಂದು ಐಇಎಂಎಸ್ ಬಿ-ಸ್ಕೂಲ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಎನ್.ಎ.ಚರಂತಿಮಠ ಹೇಳಿದ್ದಾರೆ.
ಕೇಂದ್ರ ಬಜೆಟ್ ಕುರಿತು ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮಾತನಾಡಿದ ಅವರು, ಕೇಂದ್ರ ವಿತ್ತ ಸಚಿವರು ಮಂಡಿಸಿರುವ ಬಜೆಟ್ ದೂರದೃಷ್ಟಿಯನ್ನು ಹೊಂದಿರುವ ಬಜೆಟ್ ಇದಾಗಿದೆ. ಇದರಲ್ಲಿ ದೇಶದ ಅಭಿವೃದ್ಧಿಯ ಜೊತೆಗೆ ಸಾಕಷ್ಟು ಶೈಕ್ಷಣಿಕ, ಆರ್ಥಿಕ, ಕೈಗಾರಿಕಾ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲಿದೆ. ಅಲ್ಲದೇ ನಿರುದ್ಯೋಗ ನಿವಾರಣೆಗೆ ಇದೊಂದು ಪೂರಕವಾದ ಬಜೆಟ್ ಆಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರೊಗ್ರೆಸಿವ್ ಬಜೆಟ್ ಆಗಿದ್ದು, ಹೊಸ ಚಿಂತನೆ ಹಾಗೂ ಹೊಸ ಯೋಜನೆಯ ಮೂಲಕ ನ್ಯೂ ಇಂಡಿಯಾ ಕ್ರಿಯೇಟ್ ಮಾಡಬಹುದು. ದೀರ್ಘಕಾಲದ ವರೆಗೆ ಜನರಿಗೆ ಅನುಕೂಲವಾಗುವಂತೆ ಬಜೆಟ್ ರೂಪಿಸಿ ಮಂಡನೆ ಮಾಡಲಾಗಿದೆ ಎಂದು ಅವರು ಹೇಳಿದರು.
Kshetra Samachara
01/02/2022 09:08 pm