ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮನೆ ಹಾನಿ ಪರಿಹಾರಕ್ಕೆ ಸರ್ಕಾರದಿಂದ ಜಿಲ್ಲೆಗೆ 14 ಕೋಟಿ 74 ಲಕ್ಷ ರೂ.ಬಿಡುಗಡೆ

ಹುಬ್ಬಳ್ಳಿ: ಕಳೆದ ಜುಲೈ, ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ ತಿಂಗಳುಗಳಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ಮನೆಗಳಿಗೆ ಹಾಗೂ ನವೆಂಬರ್ ತಿಂಗಳಲ್ಲಿ ಅಕಾಲಿಕ ಮಳೆಯಿಂದ ಮನೆ ಹಾನಿಯಾಗಿರುವ ಫಲಾನುಭವಿಗಳಿಗೆ ತಕ್ಷಣಕ್ಕೆ ಪರಿಹಾರ ವಿತರಿಸಲು ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿಗಳು 14 ಕೋಟಿ, 74 ಲಕ್ಷ ರೂ.ಗಳನ್ನು ಮಂಜೂರು ಮಾಡಿದ್ದಾರೆ. ನಾಳೆಯಿಂದಲೇ (ನ.24) ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪರಿಹಾರ ಮೊತ್ತ ಜಮೆ ಮಾಡಲು ಕ್ರಮವಹಿಸಬೇಕೆಂದು ಎಲ್ಲ ತಹಶಿಲ್ದಾರರಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶಿಸಿದ್ದಾರೆ.

ಮುಖ್ಯ ಮಂತ್ರಿಗಳು ವಿಶೇಷ ಆಸಕ್ತಿ ವಹಿಸಿ ಜಿಲ್ಲೆಗೆ 14 ಕೋಟಿ 74 ಲಕ್ಷ ರೂ.ಗಳನ್ನು ಮನೆ ಹಾನಿ ಪರಿಹಾರ ವಿತರಣೆಗಾಗಿ ಮಂಜೂರು ಮಾಡಿದ್ದಾರೆ. ಈ ಪರಿಹಾರವನ್ನು ವಿತರಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದು, ಜುಲೈ, ಅಗಸ್ಟ್, ಸೆಪ್ಟರಂಬರ್, ಅಕ್ಟೋಬರ ತಿಂಗಳುಗಳಲ್ಲಿ ಮನೆ ಹಾನಿಯಾಗಿರುವ ಮತ್ತು ನವೆಂಬರ್ ತಿಂಗಳಲ್ಲಿ ಅಕಾಲಿಕ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಸಂಬಂಧಿಸಿದಂತೆ ಎ ಮತ್ತು ಬಿ ಕೆಟಗೆರಿಯ ಮನೆ ಹಾನಿ ಪ್ರಕರಣಗಳಿಗೆ 95,100 ರೂ.ಗಳನ್ನು ಮತ್ತು ಸಿ ಕೆಟಗೆರಿಯ ಮನೆ ಹಾನಿ ಪ್ರಕರಣಗಳಿಗೆ 50 ಸಾವಿರ ರೂ.ಗಳನ್ನು ಫಲಾನುಭವಿಗಳ ಖಾತೆಗೆ ತಕ್ಷಣಕ್ಕೆ ನೇರ ಜಮೆ ಮಾಡಲು ಸರ್ಕಾರ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ. ಸರ್ಕಾರದ ಸುತ್ತೋಲೆಯಂತೆ ಎ ಮತ್ತು ಬಿ ಕೆಟಗೆರಿಯ ಮನೆ ಹಾನಿ ಪ್ರಕರಣಗಳಿಗೆ ಉಳಿದ ಪರಿಹಾರದ ಮೊತ್ತವನ್ನು ಆರ್‍ಜಿಎಚ್‍ಸಿಎಲ್‍ನಿಂದ ನೇರವಾಗಿ ಜಮೆ ಮಾಡಲಾಗುತ್ತದೆ.

Edited By :
Kshetra Samachara

Kshetra Samachara

23/11/2021 10:06 pm

Cinque Terre

34.27 K

Cinque Terre

9

ಸಂಬಂಧಿತ ಸುದ್ದಿ