ಧಾರವಾಡ: ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮಕ್ಕೆ ಬಸ್ಸಿನ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಗುಳೇದಕೊಪ್ಪ ಗ್ರಾಮದಿಂದ ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ಹೋಗಬೇಕು ಎಂದರೆ ಸಾಕಷ್ಟು ತೊಂದರೆಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳಗಾವಿಯಿಂದ ಧಾರವಾಡಕ್ಕೆ ಹಾಗೂ ಧಾರವಾಡದಿಂದ ಬೆಳಗಾವಿಗೆ ಹೋಗುವ ಬಸ್ಸುಗಳು ತೇಗೂರು ಮತ್ತು ವೆಂಕಟಾಪುರಕ್ಕೆ ನಿಲುಗಡೆಯಾಗುತ್ತವೆ. ಆದರೆ, ಗುಳೇದಕೊಪ್ಪಕ್ಕೆ ನಿಲುಗಡೆಯಾಗುವುದಿಲ್ಲ. ಆ ಬಸ್ಸುಗಳು ಕೂಡ ಗುಳೇದಕೊಪ್ಪಕ್ಕೆ ನಿಲುಗಡೆಯಾಗುವುದಂತೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಭೀಮಪ್ಪ ಕಾಸಾಯಿ, ವಿಠ್ಠಲ ಪೀರಗಾರ, ಪೂಜಾ ಪವಾರ, ಲಕ್ಷ್ಮೀ ಜಾಧವ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Kshetra Samachara
04/02/2021 04:59 pm