ಕುಂದಗೋಳ : ಸರ್ಕಾರಿ ಇಲಾಖೆ ಕೆಲಸ ಅಂದ್ರೇ ದೇವರ ಕೆಲಸಾ ಎಂಬ ಮಾತನ್ನ ನಂಬಿ ಸರ್ಕಾರಿ ಕಚೇರಿಗಳಿಗೆ ಹೋದ್ರೆ, ಕಚೇರಿಗಳ ತುಂಬಾ ಕೆಲಸಗಾರರೂ ಇದ್ರೂ ಸಾರ್ವಜನಿಕರಿಗೆ ಸರಿಯಾದ ಸಮಯಕ್ಕೆ ಈ ಸರ್ಕಾರಿ ಸೇವೆ ಸಿಗೋದೆ ಡೌಟು.
ಇಂತಹ ಪರಿಸ್ಥಿತಿಗಳ ನಡುವೆ ಕುಂದಗೋಳ ಪಟ್ಟಣದಲ್ಲಿ ಎರೆಡು ಇಲಾಖೆಗಳು ಸೂಕ್ತವಾದ ನೌಕರರಿಲ್ಲದೆ ಅದೆಷ್ಟು ವರ್ಷಗಳಿಂದ ಜನರಿಗೆ ಸೇವೆ ನೀಡುತ್ತಿವೆಯೋ ? ಗೊತ್ತಿಲ್ಲಾ ಸ್ವಾಮಿ. ಸ್ವತ: ಅಲ್ಲಿ ಕರ್ತವ್ಯ ಮಾಡೋ ಸಿಬ್ಬಂದಿಗಳೇ ಸಾರ್ ಸಿಬ್ಬಂದಿ ಜಾಸ್ತಿ ಮಾಡಿ ಎನ್ನುವ ಸ್ಥಿತಿ ಇದೆ.
ಆ ಇಲಾಖೆ ಹೆಸರೇ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರವರ ಕಾರ್ಯಾಲಯ ಹಾಗೂ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯದ ಉಪ ವಿಭಾಗಗಳು.
ಈ ಎರೆಡು ಇಲಾಖೆಗಳು ಒಂದೇ ಕಟ್ಟಡದಲ್ಲಿ ಕಾರ್ಯ ನಿರ್ವಹಣೆ ಮಾಡ್ತಾ ಇದ್ದು ಸಿಬ್ಬಂದಿಗಳ ಕೊರತೆ ಎದುರಿಸುತ್ತಿವೆ. ಆ ಪೈಕಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದಲ್ಲಿ ಸಹಾಯಕ ಇಂಜಿನಿಯರ್ , ಕಿರಿಯ ಇಂಜಿನಿಯರ್, ಪ್ರಥಮ ದರ್ಜೆ ಸಹಾಯಕರು, ದ್ವೀತಿಯ ದರ್ಜೆ ಸಹಾಯಕರು , ಬೆರಳಚ್ಚುಗಾರ ವಾಹನ ಚಾಲಕ, ಕಾವಲುಗಾರ ಸೇರಿ ಬರೋಬ್ಬರಿ 7 ಹುದ್ದೆಗಳು ಖಾಲಿ ಉಳಿದಿವೆ.
ಇನ್ನು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗದಲ್ಲೂ ಇದೇ ಕಥೆ ಮುಂದುವರೆದಿದ್ದು ಸಹಾಯಕ ಇಂಜಿನಿಯರ್, ಕಿರಿಯ ಇಂಜಿನಿಯರ್, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ, ಬೆರಳಚ್ಚುಗಾರ ಸೇರಿ ಒಟ್ಟು 5 ಹುದ್ದೆಗಳು ಖಾಲಿ ಇವೆ.
ಎರೆಡು ಇಲಾಖೆ ಸೇರಿ ಒಟ್ಟು 12 ಹುದ್ದೆಗಳು ಖಾಲಿ ಇದ್ದು ಈ ಪರಿಸ್ಥಿತಿ ನಡುವೆ ಇಲಾಖೆಗಳು ಅದೆಷ್ಟರ ಮಟ್ಟಿಗೆ ಸಾರ್ವಜನಿಕರಿಗೆ ಸಮರ್ಪಕ ಸೇವೆ ನೀಡುತ್ತಿವೆಯೋ ? ದೇವರೆ ಬಲ್ಲ. ಈ ಬಗ್ಗೆ ಇನ್ನಾದರೂ ಜಿಲ್ಲಾಡಳಿತ ಗಮನಿಸಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಸತತ ಹತ್ತು ಹದಿನೈದು ವರ್ಷಗಳಿಂದ ಒಂದೇ ಇಲಾಖೆಯಲ್ಲಿ ಉಳಿದಿರೋ ಅಧಿಕಾರಿಗಳಿಗೆ ವರ್ಗಾವಣೆ ಭಾಗ್ಯ ನೀಡುವಂತೆ ಜನರೇ ಒತ್ತಾಯಿಸುತ್ತಿದ್ದಾರೆ.
Kshetra Samachara
14/01/2021 10:01 am