ಧಾರವಾಡ: ಧಾರವಾಡದ ನವಲೂರು ಬಸ್ ನಿಲ್ದಾಣದಿಂದ ಜನತಾ ಪ್ಲಾಟ್‌ಗೆ ಹೋಗುವ ಮುಖ್ಯರಸ್ತೆ ಹದಗೆಟ್ಟು ಸಾರ್ವಜನಿಕರಿಗೆ ಸಾಕಷ್ಟು ಕಿರಿಕಿರಿಯುಂಟು ಮಾಡುತ್ತಿದೆ. ಬೇಸಿಗೆ ಮುಗಿದ ನಂತರ ಮಳೆಗಾಲ ಆರಂಭವಾದರೆ ಸಾಕು ಇಲ್ಲಿನ ಜನ ನರಕಯಾತನೆಯನ್ನೇ ಅನುಭವಿಸುವಂತಾಗುತ್ತದೆ.
ಈಗಾಗಲೇ ಅಡ್ಡ ಮಳೆಗಳು ಸುರಿಯುತ್ತಿರುವುದರಿಂದ ರಸ್ತೆ ಹದಗೆಟ್ಟು ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುತ್ತಿದೆ. ರಸ್ತೆಯ ಅಲ್ಲಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆಯನ್ನುಂಟು ಮಾಡುತ್ತಿದೆ. ರಸ್ತೆಗೆ ಕಾಂಕ್ರೀಟ್ ಭಾಗ್ಯ ಒದಗಿಸಿಕೊಡಿ ಎಂದು ಅಲ್ಲಿನ ಜನ ಶಾಸಕ ಅರವಿಂದ ಬೆಲ್ಲದ ಅವರಿಗೆ ಒತ್ತಾಯವನ್ನೂ ಮಾಡಿದ್ದಾರಂತೆ. ಆದರೆ, ಶಾಸಕರಿಗೆ ಅದ್ಯಾಕೋ ಇದರ ಬಗ್ಗೆ ಇನ್ನೂ ಕಾಳಜಿ ಬಂದಂತಾಗಿಲ್ಲ. ಇನ್ನು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಹೇಳಿದರೆ ಆ ಕಾರಣ ಈ ಕಾರಣ ಹೇಳಿ ರಸ್ತೆಗೆ ದುರಸ್ತಿ ಭಾಗ್ಯವನ್ನೇ ಅವರು ಕಲ್ಪಿಸಿಲ್ಲ.
ಬೇಸಿಗೆ ಅವಧಿಯಲ್ಲೇ ಈ ರಸ್ತೆಗೆ ದುರಸ್ತಿ ಭಾಗ್ಯ ಕಲ್ಪಿಸಿ, ಸುಸಜ್ಜಿತ ರಸ್ತೆ ನಿರ್ಮಾಣ ಮಾಡಿಕೊಡಬೇಕು ಎಂದು ನವಲೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇದು ವೀಕ್ಷಕ ವರದಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/03/2022 05:20 pm