ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಾಲಿಕೆಯಲ್ಲಿ ಬೇರು ಬಿಟ್ಟಿದೆ ಕಮಿಷನ್ ದಂಧೆ; ಪೌರಕಾರ್ಮಿಕರ ಬೆನ್ನು ಬಿಡದ ಬೇತಾಳ...!

ಅವರೆಲ್ಲರೂ ಅವಳಿನಗರದ ಸ್ವಚ್ಚತೆಗೆ ಶ್ರಮಿಸುತ್ತಿರುವ ಶ್ರಮ ಜೀವಿಗಳು. ಈ ಶ್ರಮ ಜೀವಿಗಳ ಬದುಕಿನ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಬಿಚ್ಚಿಡುತ್ತಿದೆ ಸ್ಫೋಟಕ ಮಾಹಿತಿ. ಕಮಿಷನ್ ದಂಧೆಯ ಕರಾಳ ಮುಖದಿಂದ ಈ ಶ್ರಮ ಜೀವಿಗಳು ಬೆಚ್ಚಿ ಬಿದ್ದಿದ್ದಾರೆ. ಕಡಿಮೆ ವೇತನದಲ್ಲಿಯೇ ಗುತ್ತಿಗೆದಾರರಿಗೆ ಹಾಗೂ ಅಧಿಕಾರಿ ವರ್ಗಕ್ಕೆ ನೀಡಬೇಕಿದೆ ಕಮಿಷನ್. ಹಾಗಿದ್ದರೇ ಏನಿದು ಸ್ಟೋರಿ ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್.

ಹೀಗೆ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ಪೌರಕಾರ್ಮಿಕರನ್ನು ವಾರಿಯರ್ಸ್‌ ಅಂತ ಕರೆಯಲಾಗುತ್ತಿದೆ. ಆದರೆ ವಿಪರ್ಯಾಸಕರ ಸಂಗತಿ ಅಂದರೆ ಈ ವಾರಿಯರ್ಸ್‌ ತಾವು ದುಡಿದ ವೇತನ ಪಡೆಯಲು ತಿಂಗಳಿಗೆ ಸಾವಿರ ಎರಡು ಸಾವಿರ ಮಾಮೂಲು ಕೊಡಬೇಕಿದೆ. ಮೊನ್ನೆಯಷ್ಟೇ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಟೋ ಟಿಪ್ಪರ್ ಚಾಲಕರು ಕಮಿಷನ್ ದಂಧೆ ವಿರುದ್ಧ ಧ್ವನಿ ಎತ್ತಿದ್ದರು. ಈಗ ಮತ್ತೊಂದು ಭಾಗವಾಗಿ ಪೌರಕಾರ್ಮಿಕರು ಕೂಡ ತಮ್ಮ ವೇತನ ಪಡೆಯಲು ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಕಮಿಷನ್ ಕೊಡಬೇಕಿದೆ. ಅವಳಿನಗರದಲ್ಲಿ ಸುಮಾರು ನೇರ ವೇತನ ಹಾಗೂ ಹೊರಗುತ್ತಿಗೆ ಸೇರಿದಂತೆ 1800 ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇದರಲ್ಲಿ ಬಹುತೇಕ ಪೌರಕಾರ್ಮಿಕರು ಕಮಿಷನ್ ಕೊಟ್ಟು ವೇತನ ಪಡೆಯಬೇಕಾಗಿದೆ.

ಇಲ್ಲಿ ದೊಡ್ಡಮಟ್ಟದಲ್ಲಿಯೇ ಕಮಿಷನ್ ದಂಧೆ ಬೇರು ಬಿಟ್ಟಿದ್ದು, ಇದರಲ್ಲಿ ವಲಯ ಅಧಿಕಾರಿಗಳು, ಹೆಲ್ತ್ ಇನ್ಸ್ಪೆಕ್ಟರ್ ಕೈವಾಡ ಇದೆಯಾ ಎಂಬುವಂತ ಅನುಮಾನ ವ್ಯಕ್ತವಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಎಂ.ಶಿವಣ್ಣ ಕೋಟೆ ಈ ಬಗ್ಗೆ ಕ್ರಮ‌ ಜರುಗಿಸುವ ಭರವಸೆ ನೀಡಿದ್ದಾರೆ.

ಒಟ್ಟಿನಲ್ಲಿ ಕೆಲಸಕ್ಕಿಂತ ಹೆಚ್ಚಿಗೆ ಕಮಿಷನ್ ಕೂಗು ಪಾಲಿಕೆಯ ಅಂಗಳದಲ್ಲಿ ಕೇಳಿ ಬರುತ್ತಿದ್ದು, ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮಗಳನ್ನು ಜರುಗಿಸಬೇಕಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

24/08/2022 08:05 pm

Cinque Terre

113.54 K

Cinque Terre

13

ಸಂಬಂಧಿತ ಸುದ್ದಿ