ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಸಾಕಷ್ಟು ಸಮಸ್ಯೆ ಅರಿತುಕೊಂಡಿದ್ದೇನೆ. ಆ ನಿಟ್ಟಿನಲ್ಲಿ ಸಮಸ್ಯೆ ಪರಿಹರಿಸಲು ಮುಂದಾಗುವೆ. ಪ್ರತ್ಯೇಕ ಮಹಾನಗರ ಪಾಲಿಕೆ ಎಂಬುದು ಸರ್ಕಾರದ ಹಂತದಲ್ಲಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ವಹಿಸುತ್ತಾರೆ. ಅಲ್ಲದೇ ಪಾಲಿಕೆ ವತಿಯಿಂದ ಸಭೆ ಕರೆದು ವರದಿಯನ್ನು ಚರ್ಚಿಸಲಾಗುವುದು ಎಂದು ಪಾಲಿಕೆ ಮಹಾಪೌರರಾದ ಈರೇಶ ಅಂಚಟಗೇರಿ ಹೇಳಿದರು.
ನಗರದಲ್ಲಿಂದು ಸಾಮಾನ್ಯ ಸಭೆಯ ವೇಳೆಯಲ್ಲಿ ಮಾಧ್ಯಮ ಜೊತೆಗೆ ಮಾತನಾಡಿ ಪ್ರತ್ಯೇಕ ಪಾಲಿಕೆ ಹೋರಾಟದ ಬಗ್ಗೆ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ. ನಾನು ಕೂಡ ಧಾರವಾಡದವನು ಆದರೇ ನಾನು ಪಾಲಿಕೆ ಸದಸ್ಯನಾಗಿ ಪಕ್ಷ ಕೈಗೊಳ್ಳುವ ತೀರ್ಮಾನಕ್ಕೆ ಬದ್ದನಾಗಿದ್ದೇನೆ ಎಂದರು.
ಘನ ತ್ಯಾಜ್ಯ ವಿಂಗಡಣೆ ಸಂಬಂಧ ಹಲವಾರು ತಾಂತ್ರಿಕ ದೋಷಗಳಿವೆ. ಅವುಗಳ ಕುರಿತು ಈಗಾಗಲೇ 12 ವಲಯದಲ್ಲಿನ ಕಾರ್ಮಿಕರ ಸಮಸ್ಯೆ ಬಗೆಹರಿಸಿ ಕಸ ವಿಲೇವಾರಿ ಮಾಡುವ ಕೆಲಸ ಮಾಡಲಾಗುವುದು ಎಂದು ಅವರು ಹೇಳಿದರು.
ಇನ್ನೂ ಮಹಿಳಾ ಸದಸ್ಯರ ಬದಲಿಗೆ ಸಂಬಂಧಿಕರ ಅಧಿಕಾರ ಚಲಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮಹಿಳಾ ಸದಸ್ಯರ ಮೂಲಕವೇ ಪಾಲಿಕೆ ವಿಷಯ ಚರ್ಚೆ ಮಾಡಲಾಗುತ್ತದೆ. ಹಲವಾರು ಮಹಿಳಾ ಸದಸ್ಯರು ಮಾತನಾಡಿದ್ದಾರೆ. ಅವರ ಗಂಡ, ಮಕ್ಕಳು ಹಾಗೂ ಸಂಭಂದಿಕರು ಇರಲಿಲ್ಲ ಎಂದು ಮಾಹಿತಿ ನೀಡಿದರು.
ಈಗಾಗಲೇ ಗಮನ ಸೆಳೆಯುವ ಸೂಚನೆಯಲ್ಲಿ ಒಂದು ಸ್ವಚ್ಛತೆ ಮತ್ತೊಂದು ಇನ್ಫೋಸಿಸ್ ಪ್ರಾರಂಭದ ಕುರಿತು ಮಾತನಾಡಿದ್ದೇವೆ. ಮುಂದೆ ಕುಡಿಯುವ ನೀರಿನ ಸಮಸ್ಯೆ ಕುರಿತು ಮಾತನಾಡುವೆವು. ಅಲ್ಲದೇ ಪ್ರತಿ ವಾರ್ಡ್ ಗೆ 50 ಲಕ್ಷ ಕೊಡುವ ಕೆಲಸ ಮಾಡುತ್ತಿದ್ದೇನೆ ಎಂದು ಅವರು ಪ್ರತಿಕ್ರಿಯೆ ನೀಡಿದರು.
Kshetra Samachara
30/06/2022 06:50 pm