ಕುಂದಗೋಳ : ರಾಜ್ಯಾದ್ಯಂತ ಮಳೆಯ ಅಬ್ಬರ ಜೋರಾಗಿದ್ದು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲೂ ಧಾರಾಕಾರ ಮಳೆಯ ಅಬ್ಬರ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಕುಂದಗೋಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಿ.ಎನ್.ಮಠಪತಿಯವರು ತಹಶೀಲ್ದಾರ ಅಶೋಕ್ ಶಿಗ್ಗಾಂವಿಯವರ ಜೊತೆ ಚರ್ಚಿಸಿ ಮಕ್ಕಳ ಹಿತದೃಷ್ಟಿಯಿಂದ ನಾಳೆ ಮೇ.20 ರಂದು ಶುಕ್ರವಾರ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ.
ನಾಳೆಯ ಮಳೆಯೂ ಧಾರಾಕಾರ ಮಳೆ ಮುಂದುವರೆದಲ್ಲಿ ಶಾಲಾ ರಜೆಯನ್ನು ವಿಸ್ತರಣೆಯನ್ನು ನಾಳೆ ಸಾಯಂಕಾಲ ನಿರ್ಧಾರ ಮಾಡುವುದಾಗಿ ತಿಳಿಸಿದ್ದಾರೆ. ಅದರಂತೆ ನಾಳೆಯ ಶೈಕ್ಷಣಿಕ ದಿನವನ್ನು ಮುಂಬರುವ ಕಲಿಕಾ ದಿನಗಳಲ್ಲಿ ಸರಿದೂಗಿಸಲು ಸೂಕ್ತ ಯೋಜನೆ ಹಾಕುವುದಾಗಿ ಅವರು ಮಾಹಿತಿ ನೀಡಿದ್ದಾರೆ.
Kshetra Samachara
19/05/2022 08:10 pm