ಹುಬ್ಬಳ್ಳಿಯ ತಾಲೂಕು ಪಂಚಾಯತಿಯಲ್ಲಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ನೇತೃತ್ವದಲ್ಲಿ ನಡೆಯುತ್ತಿದ್ದ ಕೆಡಿಪಿ ಸಭೆಯಲ್ಲಿ ಬಸ್ ಸೇವೆ ನೀಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಲಗ್ಗೆ ಇಟ್ಟಿರುವ ಘಟನೆ ನಡೆಯಿತು.
ಹೌದು.. ಇಂದು ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಸಚಿವ ಮುನೇನಕೊಪ್ಪ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ತಾಲೂಕಿನ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯುತ್ತಿದ್ದ ವೇಳೆಯಲ್ಲಿ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನೆ ಸಭೆಗೆ ಆಗಮಿಸಿದ ಶಾಲಾ ಮಕ್ಕಳು ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಸಚಿವರ ಮುಂದೆ ಕಣ್ಣೀರು ಹಾಕಿದರು.
ನಾಗರಹಳ್ಳಿಯಿಂದ ಶಿರಗುಪ್ಪಿಗೆ ಶಾಲಾ ಸಮಯದಲ್ಲಿ ಬಸ್ ಒದಗಿಸುವಂತೆ ಆಗ್ರಹಿಸಿದ ಮಕ್ಕಳು, ಕಾನ್ವೆಂಟ್, ಹೈಸ್ಕೂಲ್, ಕಾಲೇಜ್ ಗೆ ನಾಗರಹಳ್ಳಿ ಗ್ರಾಮದಿಂದ 60 ಮಕ್ಕಳು ನಿತ್ಯ 8 ಕಿಲೋಮೀಟರ್ ಪ್ರಯಾಣ ಮಾಡಬೇಕಾಗಿದೆ. ನಾಗರಹಳ್ಳಿ ಗ್ರಾಮದಿಂದ ಶಿರುಗುಪ್ಪಿ ಗೆ ಬಸ್ ನೀಡುವಂತೆ ಸಚಿವರಿಗೆ ಮನವಿ ಮಾಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/07/2022 02:58 pm