ಧಾರವಾಡ: ಇಂದು ಧಾರವಾಡ ಜಿಲ್ಲೆಯಾದ್ಯಂತ 11 ದಿನದ ಗಣೇಶನ ಮೂರ್ತಿಗಳಿಗೆ ಸಂಭ್ರಮದ ವಿದಾಯ ಹೇಳಲಾಗಿದೆ.
ಧಾರವಾಡ ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಶನಿವಾರ ಗಣೇಶನ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದ್ದು, ಅದೇ ರೀತಿ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಚಂಡೆ ವಾದನದ ಮೂಲಕ ವಿಘ್ನೇಶ್ವರನಿಗೆ ವಿದಾಯ ಹೇಳಲಾಗಿದೆ.
ಉಪ್ಪಿನ ಬೆಟಗೇರಿ ಗ್ರಾಮದ ಗ್ರಾಮ ದೇವಿಯರ ಯುವಕ ಮಂಡಳದ ಯುವಕರು ಚಂಡೆ ವಾದನವನ್ನು ತರಿಸಿದ್ದರು. ಆ ಚಂಡೆ ವಾದನದ ಮೂಲಕ ಗಣಪತಿ ಮೂರ್ತಿಯನ್ನು ಮೆರವಣಿಗೆ ಮಾಡಿ, ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು.
ಡಿಜೆ ಅಬ್ಬರದ ಮಧ್ಯೆ ಉಪ್ಪಿನ ಬೆಟಗೇರಿಯಲ್ಲಿ ಚಂಡೆ ವಾದನ ಮೊಳಗಿದ್ದು, ಕೇಳುಗರ ಕಿವಿಗೆ ಇಂಪುಂಟು ಮಾಡಿದೆ.
Kshetra Samachara
11/09/2022 10:50 am